ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಕಲ್ಮಂಜ ನೇತೃತ್ವದ ನಿಯೋಗದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಂಗಳೂರು ಸರ್ಕಿಟ್ ಹೌಸ್ ನಲ್ಲಿ ಜೂ.28 ರಂದು ವಿಧಾನ ಪರಿಷತ್ ಸದಸ್ಯರು ಹಾಗೂ ದ. ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಪರವಾಗಿ ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಹಾಗೂ ಜಿಲ್ಲಾ ಸಂಘಟನಾ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ ಆಗಮಿಸಿ ಜಿಲ್ಲಾ ಸಂಘಟನೆ ಮಾಹಿತಿ ಪಡೆದುಕೊಂಡರು.

ನೂತನ ಜಿಲ್ಲಾಧ್ಯಕ್ಷ ಮೋಹನ್ ಗೌಡ ಕಲ್ಮಂಜ ನೇತೃತ್ವದಲ್ಲಿ ಈ ಸಂದರ್ಭ ಜಿಲ್ಲೆಯ ಬೆಳ್ತಂಗಡಿ ಪುತ್ತೂರು, ಸುಳ್ಯ, ಕಡಬ, ಉಪ್ಪಿನಂಗಡಿ, ಉಳ್ಳಾಲ, ಮೂಡಬಿದ್ರಿ, ಮುಡಿಪು, ಗುರುಪುರ, ಬಂಟ್ವಾಳ, ಮುಂತಾದ ಭಾಗದಿಂದ 50ಕ್ಕೂ ಹೆಚ್ಚು ಕೃಷಿಕ ಪ್ರತಿನಿಧಿ ಗಳು ಆಗಮಿಸಿ ಸಂಘಟನೆ ಗೆ ಬೆಂಬಲ ಘೋಷಿಸಿದರು.

ಮುಂದಿನ ಪದಗ್ರಹಣ ಕಾರ್ಯಕ್ರಮ ಬಗ್ಗೆ ಈ ಸಂದರ್ಭದಲ್ಲಿ ಮೋಹನ್ ಗೌಡ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.