ಮನೆಯೊಡತಿಯೇ ಚಿನ್ನಾಭರಣ ಸ್ಥಳಾಂತರಿಸಿ ಕಳ್ಳತನ ಎಂದು ದೂರಿ ಸಿಕ್ಕಿಬಿದ್ದ‌ ಘಟನೆ ಬಹಿರಂಗ

Advt_NewsUnder_1
Advt_NewsUnder_1

ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಪುಳಿಮಜಲು ನಿವಾಸಿನಿ ಗೃಹಿಣಿಯೊಬ್ಬರು ತನ್ನ ಸ್ವಂತ ಮನೆಯಿಂದಲೇ 1.80 ಲಕ್ಷ ರೂ.‌ಮೌಲ್ಯದ ಚಿನ್ನಾಭರಣ ಎಗರಿಸಿ ಬಳಿಕ ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.

ಜೂ 24 ರಂದು ಘಟನೆ ಬೆಳಕಿಗೆ ಬಂದಿದೆ.‌ ತನಿಖೆ ವೇಳೆ, ಮನೆಯಲ್ಲಿ ನಡೆದ ಒಟ್ಟು ಸುಮಾರು 60 ಗ್ರಾಂ ತೂಕದ ರೂ 1,80,000/-ಮೌಲ್ಯದ ಚಿನ್ನಾಭರಣವನ್ನು ತನಿಖಾ ತಂಡ ವಿಚಾರಣೆ ನಡೆಸಲಾಗಿ ದೂರುದಾರ ಪುರುಷೋತ್ತಮ ಗೌಡರ ಪತ್ನಿ ಮಮತಾ ಅವರು ವೈಯಕ್ತಿಕ ಹಣಕಾಸಿನ ವ್ಯವಹಾರದ ನಿಮಿತ್ತ ಸದರಿ ಆಭರಣಗಳನ್ನು ಸ್ಥಳಾಂತರ ನಡೆಸಿ, ಫಿರ್ಯಾದಿಯ ಬಳಿ ಆಭರಣ ಕಳ್ಳತನವಾಗಿರುವುದಾಗಿ ಎಂದು ಸುಳ್ಳು ಮಾಹಿತಿ ನೀಡಿದ್ದಾಗಿದೆ‌ ಎಂದು ಸತ್ಯ ಬಹಿರಂಗವಾಯಿತು.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಸ್ತುತ ಆರೋಪಿಗೆ ನ್ಯಾಯಾಲಯ ಶರತ್ತು ಬದ್ಧ ಜಾಮೀನು ನೀಡಿದೆ ಎಂದು ವರದಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.