ಎಸ್.ಕೆ.ಎಸ್.ಎಸ್.ಎಫ್ ಬಂಗೇರಕಟ್ಟೆ ಯುನಿಟ್ ವತಿಯಿಂದ ಶ್ರಮದಾನ

ಮಚ್ಚಿನ: ಎಸ್.ಕೆ.ಎಸ್.ಎಸ್.ಎಫ್ ಸಮಸ್ತ ಸ್ಥಾಪನಾ ದಿನದ ಅಂಗವಾಗಿ ಎಸ್.ಕೆ.ಎಸ್.ಎಸ್.ಎಫ್ ಬಂಗೇರಕಟ್ಟೆ ಯುನಿಟ್ ವತಿಯಿಂದ ಮಚ್ಚಿನ ಉನ್ನತೀಕರಿಸಿದ ಹಿ.ಪ್ರಾ, ಶಾಲಾ ವಠಾರದಲ್ಲಿ ಕಳೆ ತೆಗೆಯುವ ಶ್ರಮದಾನವನ್ನು ಜೂ.26 ರಂದು ಹಮ್ಮಿಕ್ಕೊಳ್ಳಲಾಗಿತ್ತು.


ಶ್ರಮದಾನದಲ್ಲಿ ಬಂಗೇರಕಟ್ಟೆ ಎಸ್.ಎಸ್.ಎಫ್‌ನ ಅಧ್ಯಕ್ಷರಾದ ರಫೀಕ್ ಬಳ್ಳಮಂಜ, ಮಾಜಿ ಅಧ್ಯಕ್ಷ ಆದಂ, ಎಸ್.ಕೆ.ಎಸ್.ಎಸ್.ಎಫ್ ನ ಬೆಳ್ತಂಗಡಿ ವಲಯದ ಕೋಶಾಧಿಕಾರಿ ಹಕೀಂ, ಬೆಳ್ತಂಗಡಿ ವಿಖಾಯ ಚೆಯರ್‌ಮೆನ್ ಅಬೂಬಕ್ಕರ್, ಶಾಲಾ ಮುಖ್ಯ ಶಿಕ್ಷಕ ವಿಠಲ, ಯುನಿಟ್‌ನ ಸದಸ್ಯರಾದ ಅಬ್ದುಲ್ ರಹಿಮಾನ್, ಇರ್ಷಾದ್ ಅಬೂಬಕ್ಕರ್, ನಿಹಾದ್, ರಿಜ್ವಾನ್, ಮಹಮ್ಮದ್ ಶರೀಫ್, ಮಹಮ್ಮದ್ ಫಝಲ್, ಫಯಾಝ್, ಹನೀಫ್ ಸಾಲುಮರ ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.