ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದಿಂದ ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆ

ಪೆರಾಡಿ :ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಅನೇಕ ಸಮಾಜಮುಖಿ ಕೆಲಸ ಗಳನ್ನು ಮಾಡುತ್ತಾ ಬಂದಿದ್ದು. ಈ ಬಾರಿ ಕೊರೋನಾ ಕೋವಿಡ್ 19ಮಹಾಮಾರಿ ವೈರಸ್ ಹರಡಿದ್ದು ಇದರ ನಿವಾರಣೆಗೆ ಆಶಾ ಕಾರ್ಯಕರ್ತರು ರಾತ್ರಿ ಹಗಲು ಎನ್ನದೆ ದುಡಿದ್ದಿದ್ದಾರೆ. ಇವರಿಗೆ ಸಿಗುವ ವೇತನ ಅತ್ಯಲ್ಪ. ಆದರೂ ಇವರ ಸೇವೆ ವಿಶೇಷ. ಇವರ ಈ ಸೇವೆ ಮನಗಂಡು ಸಹಕಾರಿ ಸಂಘದ ಆಡಳಿತ ಮಂಡಳಿ ಸೇರಿ ಕೊಂಡು ಇವರನ್ನು ಗೌರವಿಸುವ ಬಗ್ಗೆ ತೀರ್ಮಾನಿಸಿ ಜೂನ್ 25ರಂದು ಸಂಘದ ಸಭಾಭವನದಲ್ಲಿ ತಲಾ ರೂ. 2000/-ಶಾಲು, ಹಾರ, ಫಲ ಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಸಹಕಾರಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷೆ ದೇವಕಿ ಡಿ. ಶೆಟ್ಟಿ,ಮಾರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಮುಖ್ಯ ಕಾರ್ಯನಿರ್ವಣಾಧಿಕಾರಿ ಯು. ಶೇಖ್ ಲತೀಫ್, ಸಂಘದ ನಿರ್ದೇಶಕರಾದ ಪ್ರವೀಣ್ ಪಿಂಟೊ, ಪುತ್ತು ನಾಯಿಕ, ಜಯಕುಮಾರ್ ಕೆ. ಹರಿಪ್ರಸಾದ್, ರಾಜೇಶ್ ಶೆಟ್ಟಿ, ಸುಜಾತ, ಶ್ರೀಪತಿ ಉಪಾಧ್ಯಾಯ, ಧರ್ಣಪ್ಪ ಪೂಜಾರಿ, ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.