ಬಳ್ಳಮಂಜ ಪ್ಯೂಯೆಲ್ಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಇಲ್ಲಿಯ ಪಾರೆಂಕಿ ಮಾರಿಗುಡಿ ಬಳಿ ಬಳ್ಳಮಂಜ ಪ್ಯೂಯೆಲ್ಸ್ ಎಂಬ ಪೆಟ್ರೋಲ್ ಪಂಪ್‌ನ ಉದ್ಘಾಟನೆಯು ಜೂ.26 ರಂದು ಜರುಗಿತು. ಕಚೇರಿಯನ್ನು ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಹರ್ಷ ಸಂಪಿಗೆತ್ತಾಯ ಉದ್ಘಾಟಿಸಿ ಶುಭ ಹಾರೈಸಿದರು.

ಪಂಪನ್ನು ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಉದ್ಘಾಟಿಸಿದರು.ಏರ್ ಮೆಷಿನ್ ಅನ್ನು ಕುರುಡಂಗೆ ಸದಾನಂದ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಂಗೇರಕಟ್ಟೆ ಮಸೀದಿಯ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್, ಪಾರೆಂಕಿ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಸುಬ್ರಹ್ಮಣ್ಯ ಬಳ್ಳಾಲ್, ಮಡಂತ್ಯಾರು ಚರ್ಚ್‌ನ ಧರ್ಮಗುರು ಬೇಸಿಲ್ ವಾಸ್, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ , ಪಾರೆಂಕಿ ಮಾರಿಗುಡಿ ದೇವಸ್ಥಾನದ ಮಾಜಿ ಅಧ್ಯಕ್ಷ ಮೂಡಾಯೂರು ವಿಠಲ ಶೆಟ್ಟಿ, ವಕೀಲರಾದ ಮುರಳೀ, ಬದರೀನಾಥ ಸಂಪಿಗೆತ್ತಾಯ, ಮಡಂತ್ಯಾರು ಗ್ರಾ.ಪಂ ಸದಸ್ಯ ಮೂಡಾಯೂರು ಕಿಶೋರ್ ಶೆಟ್ಟಿ, ಡಾ|ಕೆ,ಎಂ ಶೆಟ್ಟಿ ಬಳ್ಳಮಂಜ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ, ಬೆಳ್ತಂಗಡಿ ಇದರ ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ಪಾರೆಂಕಿ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜಶೇಖರ ಶೆಟ್ಟಿ, ಆಗಮಿಸಿ ಶುಭ ಹಾರೈಸಿದರು. ಸದಾನಂದ ಪೂಜಾರಿ, ಶ್ರೀಮತಿ ವಿಮಲ, ಚಿತ್ತರಂಜನ್, ವಿದ್ಯಾ ಚಿತ್ತರಂಜನ್ ಅತಿಥಿ ಗಣ್ಯರನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.