ಮಡಂತ್ಯಾರು : ಮಡಂತ್ಯಾರು ಗ್ರಾಮ ಪಂಚಾಯತಿನ ಪಾರೆಂಕಿ ಗ್ರಾಮದ ಎರಡನೇವಾರ್ಡ್ ನಲ್ಲಿ ಸಾರ್ವಜನಿಕ ರಸ್ತೆಗೆ ಪಿ.ಎಮ್ಇಸ್ಮಾಯಿಲ್ ಮತ್ತು ಮಕ್ಕಳಿಂದ ತಮ್ಮ ವರ್ಗ ಸ್ಥಳವನ್ನು ಉಚಿತವಾಗಿ ಬಿಟ್ಟುಕೊಟ್ಟು ಉದಾರತೆ ತೋರಿದರು. (ಪರನೀರು-ಕಾನ್ವೆಂಟ್ -ಕಾಲೇಜು – ಮಡಂತ್ಯಾರ್ ಪೇಟೆಗೆ ಸಂಪರ್ಕಿಸುವ ರಸ್ತೆ )
ಹಲವು ವರ್ಷಳಿಂದ ಈ ರಸ್ತೆಗೆ ಬೇಡಿಕೆ ಇದ್ದು ಸದರಿ ಸ್ಥಳವು ಖಾಸಗಿಯಾಗಿದ್ದು ಜನಪ್ರತಿನಿಧಿಗಳು ಹಾಗು ಊರ ಗಣ್ಯರು ಶ್ರಮಿಸುತ್ತಲೇ ಇದ್ದರು. ಆ ವಾರ್ಡಿನ ಸದಸ್ಯ ಅಬ್ದುಲ್ ರಹೀಮಾನ್ ಪಡ್ಪು ಮಡಂತ್ಯಾರು ಗ್ರಾಮ ಪಂಚಾಯತ್ ಅದ್ಯಕ್ಷ ಗೋಪಾಲ್ ಕೃಷ್ಣ ಕೆ, ಪಿಡಿಒ ನಾಗೇಶ್ ಎಮ್ ಹಾಗು ಪಂಚಾಯತ್ ಸದಸ್ಯ ಕಾಂತಪ್ಪ ಗೌಡ ರವರೊಂದಿಗೆ ಈ ರಸ್ತೆಯ ಅಗತ್ಯವನ್ನು ತಿಳಿಹೇಳಿ ಪಿಎಮ್ ಇಸ್ಮಾಯಿಲ್ ಮತ್ತು ಮಕ್ಕಳನ್ನು ವಿಶ್ವಾಸಕ್ಕೆ ತೆಗೊಂಡು ರಸ್ತೆ ಮಾಡುವಲ್ಲಿ ಯಶಸ್ವಿಯಾದರು.
ಇದೇ ಕುಟುಂಬ ಈ ಜಾಗದಲ್ಲಿ ಕಾಲುದಾರಿಗೆ ಜಾಗ ಬಿಟ್ಟು ಕೊಟ್ಟಿದ್ದು ಇಲ್ಲಿ ಸ್ಮರಿಸಬಹುದು. ಅಬ್ದುಲ್ ರಹಿಮಾನ್ ಪಡ್ಪು ಮತ್ತು ಪಂಚಾಯತ್ ಎರಡನೇ ವಾರ್ಡ್ ನ ಪಂಚಾಯತ್ ಸದಸ್ಯರುಗಳಾದ ಕಾಂತಪ್ಪ ಗೌಡ ಮತ್ತು ಪ್ರಮೀಳ ರವರ ಅನುದಾನವನ್ನು ಉಪಯೋಗಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಹಾಗೂ ಮೋರಿಯ ಆವಶ್ಯಕತೆ ಇದ್ದು, ಅದನ್ನು ಸಹ ಪೂರ್ತಿ ಮಾಡುವುದಾಗಿ ಮೂವರು ಸದಸ್ಯರು ಭರವಸೆ ನೀಡಿರುತ್ತಾರೆ.
ಈ ರಸ್ತೆಯಿಂದ ವಿಶೇಷವಾಗಿ ನೂರಾರು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಮಡಂತ್ಯಾರ್ ಪೇಟೆ, ಶಾಲಾ ಕಾಲೇಜು ಹಾಗು ಕಾನ್ವೆಂಟ್ ಹತ್ತಿರವಾಗಿದ್ದು ಮುಂದೆ ರಿಕ್ಷಾ, ಕಾರು ಸರಾಗವಾಗಿ ಹೋಗಲು ಸ್ವಂತ ಜಾಗವನ್ನು ಬಿಟ್ಟು ಕೊಟ್ಟ ಇಸ್ಮಾಯಿಲ್ ಮತ್ತು ಮಕ್ಕಳನ್ನು ಗ್ರಾಮ ಪಂಚಾಯತ್ ಅದ್ಯಕ್ಷ ಗೋಪಾಲ ಕೃಷ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಮ್ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಪಡ್ಪು, ಕಾಂತಪ್ಪ ಗೌಡ ,ಪ್ರಮೀಳ ಹಾಗು ಊರ ಗಣ್ಯರು ಅಭಿನಂಧಿಸಿದ್ದಾರೆ.
ಸೌಹಾರ್ದ ಪ್ರೆಂಡ್ಸ್ ಹಾಗು ಊರವರು ಶ್ರಮದಾನದಲ್ಲಿ ಕೈಜೋಡುಸಿದ್ದು , ಸಹಕರಿಸಿದ ಸಮಸ್ತ ನಾಗರಿಕರಿಗೆ, ಜನಪ್ರತಿನಿಧಿಗಳಿಗೆ ಊರ ಗಣ್ಯರುಗಳಿಗೆ, ವಿಶೇಷವಾಗಿ ವಿಶಾಲ ಮನಸು ತೋರಿಸಿ ವರ್ಗ ಜಾಗವನ್ನು ಸಾರ್ವಜನಿಕ ರಸ್ತೆಗೆ ಬಿಟ್ಟು ಕೊಟ್ಟ ಪಿ.ಎಮ್ ಇಸ್ಮಾಯಿಲ್ ಮತ್ತು ಕುಟುಂಭದವರಿಗೆ ಗ್ರಾಮ ಪಂಚಾಯತ್ ಸದಸ್ಯ ಹಾಗು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹಿಮಾನ್ ಪಡ್ಪು ದನ್ಯವಾದವಿತ್ತರು.