ಕನ್ಯಾಡಿ: ಇಲ್ಲಿಯ ಕೇಳ್ತಾಜೆ ನಿವಾಸಿ ಸಂಜೀವ ಗೌಡ(48ವ) ಅವರು ಶಂಕಿತ ಡೆಂಗ್ಯೂ ಜ್ವರದಿಂದ ಬಳಲಿ ಜೂ.23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಜ್ವರದಿಂದ ಬಳಲುತ್ತಿದ್ದು, ಸ್ಥಳೀಯ ಖಾಸಗಿ ವೈದ್ಯರಲ್ಲಿಗೆ ಜೂ.23ರಂದು ಚಿಕಿತ್ಸೆಗೆ ಹೋದಾಗ ಅವರು ಮಂಗಳೂರಿಗೆ ಕಳುಹಿಸಿದ್ದರು. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಅದೇ ಮೃತಪಟ್ಟರೆನ್ನಲಾಗಿದೆ. ಸಂಜೀವ ಗೌಡ ಅವರು ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇವರು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಗಣೇಶ್ ಸುಫಾರಿ ಅಂಗಡಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿರುವ ಮೃತರು ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ತಾಯಿ ಲಕ್ಷ್ಮೀ ಜೂ.21ರಂದು ನಿಧನರಾಗಿದ್ದರು.
ಕನ್ಯಾಡಿ ಗ್ರಾಮದ ಕೇಳ್ತಾಜೆ, ನಾವೂರು ಹಾಗೂ ಇಂದಬೆಟ್ಟು ಗ್ರಾಮದಲ್ಲಿ ಡೆಂಗ್ಯೂ ಜ್ವರದಿಂದ ಆನೇಕ ಮಂದಿ ಬಳಲುತ್ತಿದ್ದು, ಆರೋಗ್ಯ ಇಲಾಖೆ ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಕೊರೊನಾ ಟೆಸ್ಟ್: ಮಂಗಳೂರು ಆಸ್ಪತ್ರೆಯಲ್ಲಿ ಜೂ.23ರಂದು ಮೃತಪಟ್ಟ ಸಂಜೀವ ಗೌಡರ ಮೃತ ದೇಹದ ಗಂಟಲ ದ್ರವವನ್ನು ಕೊರೊನಾ ಟೆಸ್ಟ್ಗೆ ಕಳುಹಿಸಲಾಗಿದ್ದು, ಇದರ ವರದಿ ಬಂದ ನಂತರ ಶವದ ಅಂತ್ಯ ಸಂಸ್ಕಾರ ನಡೆಯಲಿದೆ.