ವೇಣೂರು ಗ್ರಾ.ಪಂ. ವ್ಯಾಪ್ತಿಯ ಕೊರೊನಾ ವಾರಿಯರ್‍ಸ್‌ಗಳಿಗೆ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು : ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೋವಿಡ್ – 19 ಸಂದರ್ಭದಲ್ಲಿ ದುಡಿದ ಕರೊನಾ ವಾರಿಯರ್‍ಸ್‌ಗೆ ಗೌರವ ಸಮರ್ಪಣಾ ಕಾರ್ಯಕ್ರಮ ಜೂ.23ರಂದು ವೇಣೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.


ಕೋವಿಡ್ -19 ವಾರಿಯರ್‍ಸ್‌ಗಳಾಗಿ ದುಡಿದ ವೇಣೂರು ಗ್ರಾ.ಪಂ. ವ್ಯಾಪ್ತಿಯ 10 ಮಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ವೇಣೂರು ಪೋಲೀಸ್ ಠಾಣಾ ಸಿಬ್ಬಂದಿಗಳು, ವೈದ್ಯರುಗಳು, ಗ್ರಾಮಕರಣಿಕರು, ಶಿಕ್ಷಕರುಗಳು, ಗ್ರಾ.ಪಂ. ಸಿಬ್ಬಂದಿಗಳು, ಸೇರಿದಂತೆ ಒಟ್ಟು 55 ಮಂದಿಯನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಆಹಾರ ಕಿಟ್ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವೇಣೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಅರುಣ್ ಕ್ರಾಸ್ತ ವಹಿಸಿದ್ದರು. ವೇಣೂರು ಪೊಲೀಸ್ ಠಾಣೆಯ ಎಸ್. ಐ ಲೋಲಾಕ್ಷ, ಕೋವಿಡ್ -೧೯ ನೋಡೆಲ್ ಅಧಿಕಾರಿ ವೇಣೂರು ಅರಣ್ಯಾಧಿಕಾರಿ ಪ್ರಶಾಂತ್ ಪೈ, ವೇಣೂರು ಜೈನ ದಿಗಂಬರ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿಜಯರಾಜ ಅಧಿಕಾರಿ, ವೇಣೂರು ವರ್ತಕರ ಸಂಘದ ಅಧ್ಯಕ್ಷ ಭಾಸ್ಕರ ಪೈ, ವೇಣೂರು ಗಾರ್ಡನ್ ವ್ಯೂ ಕಾಂಪ್ಲೆಕ್ಸ್ ಮಾಲಕ ಎಗ್ಬರ್ಡ್ ಪಿರೇರಾ, ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಜುನ್, ವೇಣೂರಿನ ವೈದ್ಯರುಗಳಾದ ಡಾ. ಸಂತೋಷ್, ಡಾ.ಸುಜ್ಞಾನ್, ಗ್ರಾಮ ಪಂಚಾಯತ್ ಹಿರಿಯ ಸದಸ್ಯೆ ಜೆಸ್ಸಿ ಟೀಚರ್, ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದು ವಾರಿಯರ್‍ಸ್‌ಗಳನ್ನು ಸನ್ಮಾನಿಸಿದರು.


ಆಶಾ ಕಾರ್ಯಕರ್ತೆ ರೇಖಾ ಮೂಡುಕೋಡಿ ಅನುಭವ ಹಂಚಿಕೊಂಡರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣ ರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವನಜಾ ನಾಡಗೀತೆ ಹಾಡಿದರು. ಗ್ರಾ.ಪಂ. ಸಿಬ್ಬಂದಿ ನಾರ್ಣಪ್ಪ ಗೌಡ ಸನ್ಮಾನಿತರ ವಿವರ ನೀಡಿದರು. ಗ್ರಾ.ಪಂ. ಹಿರಿಯ ಸದಸ್ಯ ಲೋಕಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.