ಅಳದಂಗಡಿ: ಅಶಕ್ತರಿಗೆ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆ

Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಕಳೆದ ಹಲವು ಸಮಯದಿಂದ ಉಭಯ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸುವ ಅವರ ಕಣ್ಣಿರೊರೆಸುವ ಪುಣ್ಯದ ಕೆಲಸ ಮಾಡುತ್ತಿರುವ ತಾಲೂಕಿನ ಶ್ರೇಷ್ಠ ಸಂಘಟನೆ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ. ಈ ತಂಡದ 25 ನೇ ಸೇವಾ ಯೋಜನೆಯನ್ನು ಕಾರ್ಕಳ ತಾಲೂಕಿನ ಜೋಡುರಸ್ತೆ ನಿವಾಸಿ ಲೋಕೇಶ್ ಹಾಗೂ ಗುಲಾಬಿ ದಂಪತಿಗಳ ಅನಾರೋಗ್ಯದಿಂದ ಬಳಲುತ್ತಿರುವ ಎರಡು ತಿಂಗಳ ಮಗುವಿನ ಚಿಕಿತ್ಸೆಗಾಗಿ ರೂ 15, 000/ ಹಾಗೂ 26ನೇ ಸೇವಾ ಯೋಜನೆಯನ್ನು ತೆಂಕಕಾರಂದೂರು ಗ್ರಾಮದ ಅಲಿಮಾರ್ ನಿವಾಸಿ ರಾಜು ಶೆಟ್ಟಿಯವರ ಪುತ್ರ ನಿರಂಜನ್ ಶೆಟ್ಟಿ ಇವರು ಅಕಾಲಿಕ ಇತ್ತಿಚೆಗೆ ಮರಣವನ್ನಪಿದ್ದು ಇವರ ಕುಟುಂಬವು ತೀರಾ ಬಡತನದಲ್ಲಿರುವುದನ್ನು ಮನಗಂಡು ಇವರ ಕುಟುಂಬಕ್ಕೆ ರೂ 10,000/ದ- ಚೆಕ್ಕನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘಟನೆಯ ಗೌರವ ಅದ್ಯಕ್ಷರಾದ ಶಿವಪ್ರಸಾದ್ ಅಜಿಲ, ಉದ್ಯಮಿ ಸುರೇಶ್ ಪೂಜಾರಿ ಮುಂಬಯಿ, ಗೌರವ ಸಲಹೆಗಾರಾದ ಶಶಿಧರ್ ಡೋಂಗ್ರೆ,ಸುಕೇಶ್ ,ಜೈನ್,ಅದ್ಯಕ್ಷ ಸಂತೋಷ್ ಕಟ್ಟೆ ,ಕಾರ್ಯದರ್ಶಿ ಪ್ರಕಾಶ್ ನಾರಾವಿ ಹಾಗೂ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.