ಬೆಳ್ತಂಗಡಿ ಪ.ಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

ಬೆಳ್ತಂಗಡಿ: ಇಲ್ಲಿನ ಬೆಳ್ತಂಗಡಿ ನಗರದಲ್ಲಿ ರೂ.೧೦ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು.


ಕೆಲ್ಲಗುತ್ತು ಕ್ರಾಸ್‌ನಿಂದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಶಿಲಾನ್ಯಾಸ, ಅಚ್ಚಿನಡ್ಕ ಸುಬ್ಬರಾವ್ ಮನೆಯಿಂದ ಬೊಟ್ಟುಗುಡ್ಡೆ ರಸ್ತೆ ಶಿಲಾನ್ಯಾಸ, ಜೈನ್‌ಪೇಟೆ ಬಸದಿಯಿಂದ ಪ್ರಥಮದರ್ಜೆ ಕಾಲೇಜು ರಸ್ತೆ ಶಿಲಾನ್ಯಾಸ, ಜೈನ್ ಪೇಟೆಯಿಂದ ಮೇಲಂತಬೆಟ್ಟು ರಸ್ತೆಯಲ್ಲಿ ನಾಗಮನದವರೆಗಿನ ರಸ್ತೆ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಜೂ.22 ರಂದು ನೆರವೇರಿಸಿದರು.


ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಗೌರಿ, ಜಯಾನಂದ ಗೌಡ, ಶರತ್ ಕುಮಾರ್ ಶೆಟ್ಟಿ, ಅಂಬರೀಶ್, ತುಳಸಿ ಕರುಣಾಕರ್, ರಜನಿ ಕುಡ್ವ, ಲೋಕೇಶ‍್, ಪ.ಪಂ ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗ, ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ, ನಗರ ಮಂಡಲ ಕಾರ್ಯದರ್ಶಿ ಕೇಶವ, ನಗರ ಮಂಡಲದ ಅಧ್ಯಕ್ಷ ಗಣೇಶ್, ಸ್ಥಳೀಯರಾದ ಕಿರಣ್ ಕುಮಾರ್ ಶೆಟ್ಟಿ, ಸಂಜೀವ ರೈ, ಉದ್ಯಮಿ ರಾಜೇಶ್ ನಾಯಕ್, ಕಂಟ್ರಾಕ್ಟರ್ ಶಾಫಿ, ನವೀನ್ ಜೈನ್, ಪೂಜೆ ವಿಧಿ ವಿಧಾನಗಳನ್ನು ದಯಾಕರ್ ಭಟ್ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.