ನ್ಯಾಯವಾದಿ ಸೇವಿಯರ್ ಪಾಲೇಲಿಗೆ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಚೆನ್ನೈ ಯಿಂದ ಗೌರವ ಡಾಕ್ಟರೇಟ್

ಬೆಳ್ತಂಗಡಿ : ಇಲ್ಲಿಯ ಹಿರಿಯ ನ್ಯಾಯವಾದಿ, ಮಾಜಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿಗೆ ಸಾಮಾಜ ಸೇವೆಗೆ ಚೆನ್ನೈ ಇಂಟರ್ ನ್ಯಾಷನಲ್ ಗ್ಲೋಬಲ್ ಫೀಸ್ ಯೂನಿವರ್ಸಿಟಿ ಯಿಂದ ಜೂನ್ 20ರಂದು ಬೆಂಗಳೂರಿನ ಸಿಲ್ವರ್ ಓಕ್ ರೆಸಾರ್ಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿನೀಡಿ ಗೌರವಿಸಲಾಯಿತು.

ಇವರು ಎಲ್ಎಲ್ ಬಿ ಬಳಿಕ ಎಲ್ ಲ್ ಎಂ ವಿದ್ಯಾಭ್ಯಾಸ ಮಾಡಿ ಎಂ. ಎ. ಪದವಿ ಪೂರೈಸಿದ್ದರು. 2003ರಲ್ಲಿ ವಕೀಲರ ವೃತ್ತಿ ಯೊಂದಿಗೆ ಸರಕಾರಿ ಶಾಲೆ ಯಲ್ಲಿ ಗೌರವ ಶಿಕ್ಷಕರಾಗಿ 6 ವರ್ಷ ದುಡಿದಿದ್ದಾರೆ. ಪಿ ಯು ಸಿ ಯಲ್ಲಿ ಇರುವಾಗಲೇ ಯುವಕ ಸಂಘ ಪ್ರಾಂಭಿಸಿ ಅಧ್ಯಕ್ಷರಾಗಿ, ಯುವ ಜ್ಯೋತಿ ಸ್ಫೋರ್ಟ್ಸ್ ಕ್ಲಬ್ ಸಂಚಾಲಕರಾಗಿ, 1997ರಲ್ಲಿ ಜಮಾಲಾಬಾದ್ ಕೋಟೆಯಲ್ಲಿರುವ ಕೆರೆ ಸ್ವಚ್ಛ ಗೊಳಿಸಿ ತಾರಾ ದೇವಿಯವರು ಗೌರವಿಸಿದ್ದರು.

ನಾವೂರು ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ರಾಗಿ, ಮರಿಯಾoಬಿಕಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ಸೈoಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ, ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿ, ದ. ಕ, ಉಡುಪಿ, ಮತ್ತು ಕೊಡಗು ಜಿಲ್ಲಾ ಸಿರೋ ಮಲಬಾರ್ ಕೆಎಸ್ಎಂಸಿಯ ಮಾಜಿ ಅಧ್ಯಕರಾಗಿ ದುಡಿದು, ಕಳೆದ ಬಾರಿ ನಡೆದ ಪ್ರವಾಹ ಸಂದರ್ಭ ಮತ್ತು ಈ ಬಾರಿ ಕೊರೋನಾ ವೈರಸ್ ಲಾಕ್ ಡೌನ್ ನಿಂದ ಬಳಲುತಿದ್ದ ಸಂದರ್ಭ ಇವರು ಮಾಡಿದ ವಿಶಿಷ್ಟ ಸಮಾಜ ಸೇವೆಗೆ ಈ ಗೌರವ ಸಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.