ಭ್ರಷ್ಟಾಚಾರವನ್ನು ಸಾಭೀತು ಮಾಡಲಿ: ಮೋಹಿನಿ ಶೆಟ್ಟಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವೇಣೂರು ಗ್ರಾ.ಪಂ ಅಧ್ಯಕ್ಷತೆಯಿಂದ ನನ್ನನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಅಧ್ಯಕ್ಷರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕೆಲವರು ವಾಟ್ಸಫ್‍ನಲ್ಲಿ ಪ್ರಚಾರ ಮಾಡಿದ್ದಾರೆ ಮತ್ತು ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ್ದಾರೆ ಇವರು ನಾನು ಮಾಡಿದ ಭ್ರಷ್ಟಾಚಾರವನ್ನು ಸಾಭೀತು ಮಾಡಬೇಕು. ಇಲ್ಲವಾದರೆ ನಾನು ಕೋರ್ಟು ಮೆಟ್ಟಲೇರಿ, ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಮಾಜಿ ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.

ಅವರು ಜೂ.19ರಂದು ಬೆಳ್ತಂಗಡಿ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2016ರಲ್ಲಿ ನಾನು ಅಧ್ಯಕ್ಷರಾದ ಬಳಿಕ ಕಾನೂನಿನ ಅನುಭವ ಇಲ್ಲದಿರುವಾಗ ಕೆಲ ಸದಸ್ಯರು ನನಗೆ ಒತ್ತಡ ಹಾಕಿ ಕಾಮಗಾರಿ ಬಿಲ್ಲಿಗೆ ಸಹಿ ಹಾಕಿಸಿ ಹಣ ಡ್ರಾ ಮಾಡುತ್ತಿದ್ದರು. ನನಗೆ ಅನುಭವ ಇಲ್ಲದಿರುವುದರಿಂದ ಸಹಿ ಹಾಕುತ್ತಿದ್ದೆ. ಒಂದೆರಡು ವರ್ಷಗಳಲ್ಲಿ ನನ್ನ ಕಾರ್ಯದ ಬಗ್ಗೆ ಅನುಭವವಾದ್ದರಿಂದ ಅವರ ಕೈಗೊಂಬೆಯಾಗದೆ ಕಾನೂನು ರೀತಿಯಲ್ಲಿ ಬಿಲ್ಲುಗಳಿಗೆ ಯಾರಿಗೂ ತೊಂದರೆಯಾಗದಂತೆ ಸಹಿ ಹಾಕತೊಡಗಿದೆ. ಆದರೆ ಕೆಲ ಸದಸ್ಯರು ನಾವು ಹೇಳಿದ ಮತ್ತು ತಂದ ಬಿಲ್ಲಿಗೆ ಮಾತ್ರ ಸಹಿ ಹಾಕಬೇಕು. ನಮ್ಮ ಒಪ್ಪಿಗೆ ಇಲ್ಲದೆ ಹಾಕಬಾರದು ಎಂದು ಒತ್ತಡ ತರಲಾರಂಭಿಸಿದರು. ಸಹಿ ಹಾಕದಿದ್ದರೆ ಅಧ್ಯಕ್ಷ ಸ್ಥಾನದಿಂದ ಇಳಿಸುವುದಾಗಿ ಬೆದರಿಕೆ ಹಾಕಲಾರಂಭಿಸಿದರು ಎಂದು ಆರೋಪಿಸಿದ್ದಾರೆ.

ಇದೇ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರೊರ್ವರು ನಮ್ಮ ಸದಸ್ಯರು ಹೇಳಿದಾಗೆ ಕೇಳಬೇಕು ಇಲ್ಲದಿದ್ದರೆ ಅಧ್ಯಕ್ಷ ಸ್ಥಾನದಿಂದ ಹೇಗೆ ಇಳಿಸಬೇಕೆಂದು ಗೊತ್ತು ಎಂದು ಬೆದರಿಕೆ ಹಾಕಿದ್ದು, ನಾನು ಕಾನೂನು ಬಿಟ್ಟು ಹೋಗುದಿಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ವೇಣೂರು ಠಾಣೆಗೆ ದೂರು ನೀಡಿದ್ದರೂ, ಬಿಜೆಪಿ ನಾಯಕರು ನನಗೆ ಹೆದರಿಸಿ ರಾಜೀ ಪಂಚಾಯತಿಕೆಯಲ್ಲಿ ಮುಗಿಸಿದ್ದಾರೆ ಎಂದು ಹೇಳಿದರು. ಈ ಎಲ್ಲಾ ಕಾರಣಗಳು ನನ್ನ ಅವಿಶ್ವಾಸಕ್ಕೆ ಕಾರಣವಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಮೋಹಿನಿ ಶೆಟ್ಟಿ ಅವರ ಪತಿ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.