ಲಾಯಿಲ ಜ್ಯೋತಿ ಹಾಸ್ಪಿಟಲ್ ಗೆ ಎನ್.ಎ.ಬಿ.ಹೆಚ್. ಮಾನ್ಯತೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಲಾಯಿಲ ಜ್ಯೋತಿ ಆಸ್ಪತ್ರೆ 16 ವರ್ಷ ಪೂರೈಸಿ ಮುನ್ನಡೆಯುತ್ತಿದೆ. 2004 ರ ಜೂ.19 ರಂದು ಸುಸಜ್ಜಿತ 50 ಹಾಸಿಗಳಿಂದ ಆರಂಭವಾದ ಈ ಆಸ್ಪತ್ರೆ ಎಲ್ಲಾ ವರ್ಗದವರಿಗೆ ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಜನರ ಪ್ರಶಂಸೆಗೆ ಪಾತ್ರವಾಗಿ ಇಂದಿಗೆ 16 ವರ್ಷ ಪೂರೈಸಿದೆ. ಸಾಮಾನ್ಯ ಜನರಿಗೆ, ಬಡವರಿಗೆ, ಮತ್ತಷ್ಟು ಹೆಚ್ಚಿನ ಆರೋಗ್ಯ ಸೇವೆ ನೀಡಲು ಆಧುನಿಕ ತಂತ್ರಜ್ಞಾನವುಳ್ಳ ಸಲಕರಣೆಗಳನ್ನು ಹೊಂದಿದೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ.ಸಿ|ಅನೂಜ(ಹೆರಿಗೆ ಸ್ರ್ತೀ ಮತ್ತು ಪ್ರಸೂತಿ ತಜ್ಞೆ) ಹೆರಿಗೆ ಮತ್ತು ಸ್ತ್ರೀ ರೋಗಕ್ಕೆ ಸಂಬಂಧಪಟ್ಟ ಎಲ್ಲಾ ಚಿಕಿತ್ಸೆಗಳನ್ನು ನೀಡುತ್ತಿದ್ದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಹಾಗೆಯೇ ಆಸ್ಪತ್ರೆಯಲ್ಲಿ ಸರ್ಜನ್ ಆಗಿರುವ ಡಾ.ಸಿ|ಆನ್ ಗ್ರೇಸ್, ರೋಗಿಗಳಿಗೆ ಚಿಕಿತ್ಸೆ ನೀಡಿ ಅವರಿಗೆ ಆತ್ಮಸ್ಥರ್ಯ ತುಂಬುತ್ತಿದ್ದಾರೆ. ಆಸ್ಪತ್ರೆಯ ಆಡಳಿತಾಧಿಕಾರಿ ಸಿ|ಸುಬಿನ್ ಅವರ ನೇತೃತ್ವದಲ್ಲಿ ಇಂದು ಜ್ಯೋತಿ ಆಸ್ಪತ್ರೆ ಎನ್.ಎ.ಬಿ.ಹೆಚ್. ಮಾನ್ಯತೆ ಪಡೆದುಕೊಂಡು 16 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ನಗು ಮೊಗದಿಂದ ಸ್ವಾಗತಿಸುವ ಸ್ಟಾಫ್ ಗಳು, ದಾದಿಯರು, ಹಗಲಿರುಳು ಜನರ ಸೇವೆ ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.