ಮುಂಡಾಜೆ ಶಾಲೆಯ ಬುಲ್ ಬುಲ್ – ಗೈಡ್ ವಿದ್ಯಾರ್ಥಿಗಳಿಂದ ಮಾಸ್ಕ್ ವಿತರಣೆ ಕೋವಿಡ್ ಜಾಗೃತಿ ಅಭಿಯಾನ

ಮುಂಡಾಜೆ: ಇಲ್ಲಿನ‌ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ ಶಾಲೆಯ ಬುಲ್ ಬುಲ್‌ ಮತ್ತು ಗೈಡ್ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಹೆತ್ತವರ ಸಹಕಾರದೊಂದಿಗೆ ಸಿದ್ಧಪಡಿಸಿದ ಮಾಸ್ಕ್ ಗಳ ವಿತರಣೆ ಮತ್ತು ಕೋವಿಡ್ ಜಾಗೃತಿ ಕಾರ್ಯಕ್ರಮ‌ ಜೂ. 15 ರಂದು ಮುಂಡಾಜೆ ಮಂಜುಶ್ರೀ ನಗರ ಜನತಾ ಕಾಲನಿಯಲ್ಲಿ ನಡೆಯಿತು.

ಗೈಡ್ ವಿದ್ಯಾರ್ಥಿಗಳಾದ ಜೆನೀಕ್ಷಾ ಮತ್ತು ಪ್ರೀತಿ, ಬುಲ್ ಬುಲ್ ವಿದ್ಯಾರ್ಥಿಗಳಾದ ಚಿನ್ಮಯ ಮತ್ತು ಆಶಿಫಾ ಎ. ಆರ್ ಅವರು ಕಾಲನಿಗೆ ಭೇಟಿನೀಡಿ ಸೇನಿಟೈಸರ್, ಸಾಮಾಜಿಕ ಅಂತರ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ಕಾಲನಿಯ ಮನೆಗೆ ಮಾಸ್ಕ್ ಹಸ್ತಾಂತರಿಸಿದರು.

ಬುಲ್ ಬುಲ್ ಫ್ಲಾಕ್ ಲೀಡರ್ ಸೇವಂತಿ ನಿರಂಜನ್ ಮಾಹಿತಿ ನೀಡಿದರು. ಗೈಡ್ ಕ್ಯಾಪ್ಟನ್ ಸುನಂದ, ಎಸ್ ಡಿ ಎಂ ಸಿ ಅಧ್ಯಕ್ಷ ಗಣೇಶ್ ಬಂಗೇರ, ಸದಸ್ಯರಾದ ಅಶ್ರಫ್ ಆಲಿಕುಂಞಿ, ಗುಣವತಿ ಮತ್ತು ಗುಲಾಬಿ, ಹೆತ್ತವರಾದ ಜಿರಣ್ ಕಡಿರುದ್ಯಾವರ, ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಗೋಪಿ,‌ ಮೀನಾ ಅಣ್ಣು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.