ಶಿಶಿಲ: ಭಾರತೀಯ ಮಜ್ದೂರ್ ಸಂಘದ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ

ಶಿಶಿಲ: ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಇದರ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿಯನ್ನು ನೀಡುವ ಕಾರ್ಯಕ್ರಮ ಶಿಶಿಲ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ನೂತನ BMS ಗ್ರಾಮ ಸಮಿತಿಯನ್ನು ‌ ರಚಿಸಲಾಯಿತು ಅದ್ಯಕ್ಷರಾಗಿ ಸುಬ್ರಾಯ ಗೌಡ ,ಕಾರ್ಯದರ್ಶಿಯಾಗಿ ಹರೀಶ್ ಮತ್ತು ಜತೆ ಕಾರ್ಯದರ್ಶಿ ಪುರುಷೋತ್ತಮ ಅವರನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು ನಂತರ BMS ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ ಬಿ.ಕೆ ಅವರು ಭಾರತೀಯ ಮಜ್ದೂರ ಸಂಘದ ಕಾರ್ಯ ಚಟುವಟಿಕೆ ಕುರಿತು‌ ಮತ್ತು ದ್ಯೇಯ ಉದ್ದೇಶದ ಕುರಿತು ಮಾಹಿತಿ ನೀಡಿದರು ಮತ್ತು BMS ನ ತಾಲೂಕು ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ ಅವರು ಕಾರ್ಮಿಕ ಸೌಲಭ್ಯ ಮತ್ತು ನೊಂದಾವಣೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಿಶಿಲ ಗ್ರಾಮ ಪಂಚಾಯತ್ ಸದಸ್ಯರಾದ ಸೂರಜ್ ನೆಲ್ಲಿತ್ತಾಯ ಹಾಗೂ ಸ್ಥಳೀಯ ಪ್ರಮುಖರರಾದ ವ್ರಷಾಂಕ್ ಖಾಡಿಲ್ಕರ್ ಮತ್ತು ಕರುಣಾಕರ ಶಿಶಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.