ಮಕ್ಕಳಿಂದಲೇ ನಡೆಯಿತು ತಂದೆಯ ಭರ್ಬರ ಕೊಲೆ; ಕರಾಯ ಗ್ರಾಮದ ಮುಗ್ಗದಲ್ಲಿ ಘಟನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ಮಕ್ಕಳಿಬ್ಬರು ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ಜೂ.14ರಂದು ಮಧ್ಯರಾತ್ರಿ ನಡೆದಿದೆ.

ಕರಾಯದ ದರ್ಣಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬವರು ಕತ್ತಿಯಿಂದ ಕಡಿದು ಕೊಲೆ ನಡೆಸಿದ್ದು, ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ದರ್ಣಪ್ಪ ಪೂಜಾರಿಯವರು ತೆಂಗಿನ ಮರದಿಂದ ತೆಂಗಿನಕಾಯಿ,  ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಇದೇ ವಿಚಾರಕ್ಕೆ ಆಗಾಗ ಪತ್ನಿ, ಮಕ್ಕಳು ಇವರಲ್ಲಿ ಜಗಳ ಮಾಡುತ್ತಿದ್ದರು. ಆದಿತ್ಯವಾರ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ ಮಕ್ಕಳೊಳಗೆ ಜಗಳವಾಗಿದ್ದು, ಈ ಸಂದರ್ಭ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದಾರೆ. ಹಲ್ಲೆಗೊಳಗಾದ ದರ್ಣಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.