ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮತ್ತೆ ಜೀವ ಕಳೆ ತುಂಬಿದೆ

ಧರ್ಮಸ್ಥಳ :ಕೊರೋನಾ ಕೋವಿಡ್ 19 ವೈರಸ್ ಇಡೀ ದೇಶಕ್ಕೆ ವಕ್ಕರಿಸಿದೆ. ಈಗ ನಮ್ಮ ದೇಶಕ್ಕೂ ವಕ್ಕರಿಸಿ ಕೊರೋನಾ ವೈರಸ್ ಹರಡ ಬಾರದೆಂದ್ದು ಮಾರ್ಚ್ 22ರಿಂದ ಲಾಕ್ ಡೌನ್ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಸ್ಥಾನ, ಮಠ, ಚರ್ಚ್, ಮಸೀದಿಗಳು ಮುಚ್ಚಿದ್ದವು. ಜೂನ್ 8 ರಿಂದ ಲಾಕ್ ಡೌನ್ ಸಡಿಲಿಕೆಯಿಂದ ದೇವಸ್ಥಾನಗಳು ಮತ್ತೆ ತೆರೆದು ಕೊಂಡ್ಡಿವೆ.

ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಶಾದ್ಯಂತ ಭಕ್ತಾದಿಗಳು ಆಗಮಿಸಿ ದೇವರ ದರ್ಶನದಲ್ಲಿ ಭಾಗಿಗಳಾಕ್ತ ಇದ್ದಾರೆ. ಲಾಕ್ ಡೌನ್ ನಿಂದ ಸುಮಾರು 3 ತಿಂಗಳಿಂದ ಮುಚ್ಚಿದ್ದ ವ್ಯಾಪಾರ ವೈವಾಟು ಪ್ರಾರಂಭಗೊಂಡ್ಡಿದ್ದು ಮತ್ತೆ ಜೀವ ಕಳೆ ತುಂಬಿದೆ.ಸದಾ ಜನ ಜಂಗುಳಿಯಿಂದ ಕೂಡಿದ್ದ ಶ್ರೀ ಕ್ಷೇತ್ರ ಲಾಕ್ ಡೌನ್ ನಿಂದ ಖಾಲಿ ಖಾಲಿಯಾಗಿದ್ದ ಸುಂದರ ನಗರ ಧರ್ಮಸ್ಥಳದಲ್ಲಿ ಮತ್ತೆ ಜನರಿಂದ ಕಂಗೊಳಿಸುತ್ತಿದೆ. 2 ನೇ ಶನಿವಾರ ಆದರಿಂದ ಇಂದು ಬೇರೆ ಬೇರೆ ಕಡೆಯಿಂದ ಭಕ್ತಾಧಿಗಳು ಆಗಮಿಸಿ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ ಶ್ರೀ ಮಂಜುನಾಥನ ಧರ್ಶನ ಪಡೆಯುತ್ತಿದ್ದಾರೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸ್ಕ್ರೀನಿಂಗ್ ಹಾಗು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.