ಬಾರ್ಯ ಗ್ರಾ.ಪಂ ಅವವ್ಯಹಾರ ಆರೋಪ ಬಯಲು| ಪಂಚಾಯಿತಿ ಪಿಡಿಓ ಸಹಿತ ಸಿಬ್ಬಂದಿಗಳಿಂದ 4.55 ಲಕ್ಷ ರೂ. ಮರು ಪಾವತಿಗೆ ಆದೇಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬಾರ್ಯ ಗ್ರಾ.ಪಂನಲ್ಲಿ 2017-18ರ ಸಾಲಿನಲ್ಲಿ ರಶೀದಿ ಪುಸ್ತಕಗಳ ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣ ತನಿಖೆ ನಡೆಸಿರುವ ದ.ಕ ಜಿಲ್ಲಾ ಪಂ. ಗ್ರಾ.ಪಂ ಪಿಡಿಓ ಸಹಿತ 6 ಮಂದಿ ಸಿಬ್ಬಂದಿ ತಪ್ಪಿತಸ್ಥರೆಂದು ತಿಳಿಸಿ, ನಡೆದಿರುವ  10,92,108 ರೂ ಅವ್ಯವಹಾರಕ್ಕೆ ಸಂಬಧಿಸಿದ0ತೆ ಅದರ ಶೇ.15 ಬಡ್ಡಿ ಹಣ  4,55,861 ರೂ. ಪಾವತಿ ಮಾಡುವಂತೆ ಆದೇಶಿಸಿದೆ. 2016-17 ಮತ್ತು  2017-18ನೇ ಲೆಕ್ಕಪರಿಶೋಧನೆಯಲ್ಲಿ ಗ್ರಾ.ಪಂಚಾಯಿತಿಯಲ್ಲಿ ರಶೀದಿ ಪುಸ್ತಕಗಳನ್ನು ದುರುಪಯೋಗಪಡಿಸಿ ನೀರಿನ ವಸೂಲಿಯಲ್ಲಿ ಕ್ರಮವಾಗಿ  6,92,377 ರೂ. ಮತ್ತು  3,99,731 ಸೇರಿದಂತೆ ಒಟ್ಟು  10,92,108 ರಷ್ಟು ಮೊತ್ತವನ್ನು ಬ್ಯಾಂಕಿನಲ್ಲಿರುವ ಸಂಬ0ಧಿಸಿದ ಖಾತೆಗೆ ಜಮೆ ಆಗದಿರುವುದು ಕಂಡು ಬರುತ್ತದೆ ಮತ್ತು ಈ ಮೊತ್ತ ವಸೂಲಿ ಮಾಡಿ ನೀರಿನ ಖಾತೆಗೆ ಜಮೆ ಮಾಡಲು ಆದೇಶಿಸಲಾಗಿತ್ತು. ಅದರಂತೆ ಈ ಹಣವನ್ನು 10 ಕಂತುಗಳಲ್ಲಿ ಪಾವತಿ ಮಾಡಲಾಗಿದೆ. ಆದರೆ ದುರುಪಯೋಗಪಡಿಸಿ ಮೊಬಲಗಿಗೆ ಶೇ.15ರಷ್ಟು ಬಡ್ಡಿಯನ್ನು ಸಂಬ0ಧಪಟ್ಟ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಯಿ0ದ ವಸೂಲಿ ಮಾಡಿ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕು ಪಂಚಾತಿ ಕಾರ್ಯನಿರ್ವಹಣಾಧಿಕಾರಿ ಅವರು ಗ್ರಾಮ ಪಂಚಾಯಿತಿನ ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪ್ರಸ್ತಕ ಚೆನ್ನರಾಯಪಟ್ಟಣ ಜುಟ್ಟನಹಳ್ಳಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಆಗಿರುವ ಎಚ್.ಡಿ. ದೇವರಾಜ್, ಬಾರ್ಯ ಗ್ರಾ.ಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜು, ಗುಮಾಸ್ತೆ ಪ್ರಮೀಳ, ತೆರಿಗೆ ವಸೂಲಿಗ ಸಂಜೀವ, ನಳ್ಳಿ ನೀರಿನ ಕರವಸೂಲಿಗ ಮಾಧವ ಮತ್ತು ಗ್ರಾ.ಪಂ ಜವಾನ ಕುಶಾಲಪ್ಪ ಇವರಿಗೆ ನೋಟೀಸು ಜಾರಿ ಮಾಡಿ 4.55 ಲಕ್ಷ ರೂ. ಮರು ಪಾವತಿ ಮಾಡುವಂತೆ ಆದೇಶ ನೀಡಲಾಗಿದೆ.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.