ಬೆಳ್ತಂಗಡಿ: ಜೂ. 30 ರವರೆಗೆ ಚರ್ಚ್​ಗಳನ್ನು ತೆರೆಯದಂತೆ ಧರ್ಮಾಧ್ಯಕ್ಷರ ಆದೇಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ಸೋಂಕಿತರ ಸಂಖ್ಯೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತೀವ್ರವಾಗಿ ಏರಿಕೆ ಅಗುತ್ತಿರುವುದರಿಂದ ಉಭಯ ಜಿಲ್ಲೆಗಳ ಧಾರ್ಮಿಕ ಕೇಂದ್ರಗಳನ್ನು ಜೂನ್ 30 ರ ತನಕ ತೆರೆಯದಂತೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿಯವರು ಆದೇಶಿಸಿದ್ದಾರೆ.

ಸರಕಾರದ ನೂತನ ಆದೇಶದಂತೆ ಜೂ. 8 ರಿಂದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಷರತ್ತುಬದ್ದ ನಿಬಂಧನೆಗೆ ಒಳಪಟ್ಟು ತೆರೆಯಲು ಅನುಮತಿ ನೀಡಲಾಗಿತ್ತು. ಅದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್ 19 ಸೋಂಕು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತೀವ್ರವಾಗಿ ಏರಿಕೆ ಅಗುತ್ತಿರುವುದರಿಂದ ಜೂನ್ 30 ರ ತನಕ ಚರ್ಚ್​ಗಳನ್ನು ತೆರೆಯದಂತೆ ಧರ್ಮಾಧ್ಯಕ್ಷರು ಸೂಚನೆ ನೀಡಿದ್ದಾರೆ.

ಕೊಡಗು ವಿಭಾಗ ಗ್ರೀನ್ ಝೋನ್ ಎಂದು ಘೋಷಿಸಿದ್ದು ಇಲ್ಲಿ ಧಾರ್ಮಿಕ ಕೇಂದ್ರಗಳನ್ನು ಜೂ. 14 ರಿಂದ ಎಂದಿನಂತೆ ತೆರೆಯಲಾಗುತ್ತದೆ. ಜನರು ಸರಕಾರದ ಆದೇಶದಂತೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಬಳಸಿ ಧರ್ಮಗುರುಗಳ ಮಾರ್ಗದರ್ಶನದಂತೆ ನಡೆಯಲು ಸೂಚಿಸಿರುತ್ತಾರೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಪಿಆರ್​ಓ ರೆ.ಫಾ. ಟೋಮಿ ಕಳ್ಳಿಕ್ಕಾಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.