ಶಾಲೆತ್ತಡ್ಕ ಅಂಗನವಾಡಿ ಕಾರ್ಯಕರ್ತೆ ಪಿ.ಟಿ ಎಲಿಯಮ್ಮ ಸೇವಾ ನಿವೃತ್ತಿ

ಕಳೆಂಜ : ಶಾಲೆತ್ತಡ್ಕ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪಿ.ಟಿ ಎಲಿಯಮ್ಮ ಗುಂಡಿಗದ್ದೆ ಇವರು ಮೇ.31 ರಂದು ಸೇವಾ ನಿವೃತ್ತಿ ಹೊಂದಿದರು.
ಅಂಗನವಾಡಿ ಕೇಂದ್ರ ಪ್ರಾರಂಭವಾದ ಪ್ರಥಮದಲ್ಲಿ 1982ರ ಜ.1 ರಂದು ಕಾಯರ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯಾಗಿ ಸೇರಿದ ಇವರು 10 ವರ್ಷಗಳ ಸೇವೆಯ ನಂತರ 1992 ರಲ್ಲಿ ಶಾಲೆತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೊಂಡು ಒಟ್ಟು 28 ವರ್ಷಗಳ ಸೇವೆ ನೀಡಿ ಮೇ.31 ರಂದು ನಿವೃತ್ತಿಗೊಂಡರು.

ಪತಿ ಎನ್.ಕೆ . ಚಾಕೋ ಕಾಯರ್ತಡ್ಕದಲ್ಲಿ ಆರ್.ಪಿ.ಎಸ್ ರಬ್ಬರ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಓರ್ವ ಪುತ್ರ , 2 ಪುತ್ರಿಯರನ್ನು ಹೊಂದಿರುವ ಇವರು ಹೆಣ್ಣು ಮಕ್ಕಳಾದ ದೀಪ್ತಿ, ದೀಪಾರವರಿಗೆ ವಿವಾಹವಾಗಿದ್ದು, ಪುತ್ರ ದೀಪಕ್ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.