ನಾವರ ಅಂಗನವಾಡಿ ಸಹಾಯಕಿ ಸುಶೀಲ ಹೆಗ್ಡೆ ಸೇವೆಯಿಂದ ನಿವೃತ್ತಿ

ನಾವರ: ಇಲ್ಲಿನ ನಾವರ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿದ ಸುಶೀಲ ಹೆಗ್ಡೆ ಮೇ.1ರಂದು ಸೇವೆಯಿಂದ ನಿವೃತ್ತಿಯಾದರು. 1996 ರಲ್ಲಿ ಅಂಗನವಾಡಿಯಲ್ಲಿ ಸಹಾಯಕಿ ವೃತ್ತಿಗೆ ಸೇರಿದ್ದು ಅತ್ಯಂತ ನಿಷ್ಠೆ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತಿಯಾದರು.

ನಾಟಿ ವೈದ್ಯರಾಗಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ ನಾವರ ಮಹಿಳಾ ಮಂಡಳಿಗಳ ಅಧ್ಯಕ್ಷರಾಗಿ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿ, ನಾವರ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷರಾಗಿ, ಶಾರದೋತ್ಸವ ಸಮಿತಿ ಸದಸ್ಯರಾಗಿಸೇವೆ ಸಲ್ಲಿಸಿದ್ದಾರೆ. ಜೊತೆಗೆ ಓರ್ವ ಮಿತ್ರಾ ಕಲಾವಿದೆಯಾಗಿ ಊರಿನ ಜಾತ್ರಾ ಹಾಗೂ ಇತರ ಕಾರ್ಯಕ್ರಮಗಳಲ್ಲಿ ನಾಟಕದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ನಾವರ ಅಶೋಕ ನಗರದಲ್ಲಿ ೨ ಮಕ್ಕಳೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.