ಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾವಿಧಿ ಸರಕಾರದ ಅನುಮತಿ ನಿರಾಕರಣೆಯಿಂದ ಮುಂದೂಡಲಾಗಿದೆ : ಎ.ಸಿ ವಿನಯ್ ಕುಮಾರ್

ಬೆಳ್ತಂಗಡಿ ರಾಜ್ಯ ಕೆಪಿಸಿಸಿ ಅಧ್ಯಕ್ಷ ಪ್ರತಿಜ್ಞಾವಿಧಿ ಸರಕಾರ ಅನುಮತಿ ನೀಡದೇ ಇರುವುದರಿಂದ ಮುಂದೂಡಲಾಗಿದೆ. ಮುಂದಕ್ಕೆ ಸರಕಾರದ ಅನುಮತಿ ಪಡೆದುಕೊಂಡೆ ಸುಸಜ್ಜಿತವಾಗಿ ಮಾಡಲಾಗುವುದು ಎಂದು ಎ.ಸಿ ವಿನಯ್ ಕುಮಾರ್ ತಿಳಿಸಿದರು.


ಅವರು ಜೂ 10 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಖಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಕಳೆದ ಮಾರ್ಚ್ ತಿಂಗಳಲ್ಲಿ ಆಯ್ಕೆಯಾಗಿದ್ದರೂ ಕಾಂಗ್ರೇಸ್ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 10 ಲಕ್ಷ ಕಾರ್ಯಕರ್ತರು ಪ್ರತಿಜ್ಞಾ ಸ್ವೀಕಾರಿಸುವ ಮೂಲಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದ 7800 ಕಡೆಗಳಲ್ಲಿ ಝೂಮ್ ಆಪ್ ಮೂಲಕ ಎಲ್ಲಾ ಕಾರ್ಯಕರ್ತರು ನೋಡುವ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ ಗೌಡ ಮಾತನಾಡುತ್ತಾ ಕಳೆದ ವರ್ಷದ ಮಳೆಗಾಲದ ಸಂಧರ್ಭದಲ್ಲಿ ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ ಹಾನಿಯಾಗಿತ್ತು ಈ ಸಂದರ್ಭದಲ್ಲಿ ಶಾಸಕರು ಫಂಡ್ ಪ್ರಾರಂಭಿಸಿ ಸಹಕಾರ ಸಂಘಗಳಿಂದ ದಾನಿಗಳಿಂದ ದೇಣಿಗೆ ಸಂಗ್ರಹ ಮಾಡಿದ್ದರು ಈ ಹಣ ವಿನಿಯೋಗದ ಬಗ್ಗೆ ವಿವರ ನೀಡಲಿಲ್ಲ ಈ ಬಗ್ಗೆ ಲೆಕ್ಕ ನೀಡಬೇಕು. ಈಗಾಗಲೆ ಮಳೆಗಾಲ ಪ್ರಾರಂಭದಲ್ಲಿಯೇ ನದಿಗಳಲ್ಲಿ ನೀರು ಹೋಗಲು ಸಮಸ್ಯೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂಯೋಜಕ, ಮಂಗಳೂರು ಕಾರ್ಪೋರೇಟರ್ ಅನಿಲ್ ಕುಮಾರ್, ಜಿಲ್ಲಾ ರೇಷನ್ ಘಟಕದ ಅಧ್ಯಕ್ಷ ಮೋಹನ ಗೌಡ ಕಲ್ಮಂಜ, ನ್ಯಾಯವಾದಿ ಮನೋಹರ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.