ಮಲವಂತಿಗೆ: 1100 ಮೀ. ಉದ್ದದ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಲವಂತಿಗೆ: ಇಲ್ಲಿನ ವಿದ್ಯಾನಗರದ ನಂದಿಕಾಡು-ಸಿಂಗನಾಡು ಪರಿಶಿಷ್ಟ ಪಂಗಡದ ರಸ್ತೆ ಕಾಂಕ್ರೀಟಿಕರಣ ಪೂರ್ಣಗೊಂಡಿದ್ದು. ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ ಹಾಗೂ ಉಪವಿಭಾಗ ಬೆಳ್ತಂಗಡಿ ವತಿಯಿಂದ 50 ಲಕ್ಷ ರೂ ಅನುದಾನದಲ್ಲಿ ಸುಮಾರು 1100 ಮೀ. ಉದ್ದದ ಕಾಂಕ್ರೀಟ್ ರಸ್ತೆಯು ಜೂ.6 ರಂದು ಉದ್ಘಾಟನೆಗೊಂಡಿತು.

ಶಾಸಕ ಹರೀಶ್ ಪೂಂಜ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಈ ಭಾಗದ ಜನರ ಬಹುದಿನದ ಬಯಕೆ ಇಂದು ಈಡೇರಿದೆ ಎಂದರು. ಅಲ್ಲದೆ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲು ಮುಳುಗು ಸೇತುಯನ್ನು ನಿರ್ಮಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಸೌಮ್ಯಲತಾ, ಮಲವಂತಿಗೆ ಗ್ರಾ. ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ತಾಲೂಕು ಬಿಜೆಪಿ ಕಿಸಾನ್ ಘಟಕದ ಅಧ್ಯಕ್ಷ ಜಯಂತ ಗೌಡ, ಮಾಜಿ ಪಂ. ಅಧ್ಯಕ್ಷ ಎಸ್.ಎನ್ ತುಳುಪುಳೆ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ಗೌಡ, ಗ್ರಾ.ಪಂ ಸದಸ್ಯರುಗಳು ಹಾಗೂ ಊರಿನ ಜನರು ಉಪಸ್ಥಿತರಿದ್ದರು.
ಜಯಂತ ಹೆಗ್ಡೆ ಹೊಸತೋಟ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.