ಸುಜುಕಿ ಪೈ ಕೇರ್ ಸ್ಥಳಾಂತರಿತ ಶೋ ರೂಮ್ ಉದ್ಘಾಟನೆ

Advt_NewsUnder_1
Advt_NewsUnder_1

 ನೂತನ ಸುಜುಕಿ ಶೋರೋಮ್ ನ್ನು ಮಾಜಿ ಶಾಸಕ ಕೆ ವಸಂತ ಬಂಗೇರ ಉದ್ಘಾಟಿಸಿದರು

ಬೆಳ್ತಂಗಡಿ: ಟಿ.ಬಿ ಕ್ರಾಸ್‌ನಲ್ಲಿ ಸತತ 7 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ತಾಲೂಕಿನ ಅಧೀಕೃತ ಸುಜುಕಿ ಮೋಟಾರು ಮಳಿಗೆ ಪೈ ಕ್ಯಾರ್ ಶುಕ್ರವಾರ ಲಾಯಿಲ ಮುಖ್ಯ ರಸ್ತೆ ಸಮೀಪಕ್ಕೆ ಸ್ಥಳಾಂತರಗೊಂಡು ಆರಂಭಗೊಂಡಿತು.


ನೂತನ ಮಳಿಗೆಯನ್ನು ಮಾಜಿ ಶಾಸಕ ಕೆ ವಸಂತ ಬಂಗೇರಾ ಉದ್ಘಾಟಿಸಿ ಶುಭ ಹಾರೈಸಿದರು. ಮಾಲಕರ ತಂದೆಯಾದ ರಮೇಶ್ ಪೈ ಮತ್ತು ರಮ್ಯ ಡಿ ಗುಲ್ವಾಡಿ ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯ ಕೆ ಹರೀಶ್ ಕುಮಾರ್, ನ್ಯಾಯವಾದಿ ಪ್ರತಾಪ್ ಸಿಂಹ ನಾಯಕ್, ವೆಂಕಟ್ರಮಣ ದೇವಸ್ಥಾನ ಲಾಯಿಲ ಆಡಳಿತ ಮುಖ್ಯಸ್ಥರಾದ ಡಾ| ಸುಧೀರ್ ಪ್ರಭು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀಣಾ ರಾವ್, ಬಿಜೆಪಿ ಹಿರಿಯ ಮುಖಂಡ ಪ್ರಸಾದ್ ಕುಮಾರ್, ಪೈ ಸೆಲ್ಸ್‌ನ ಮುಖ್ಯಸ್ಥರಾದ ಗಣಪತಿ ಪೈ, ರತ್ನಾಕರ ಪೈ,  ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಿರೀಶ್ ಡೋಂಗ್ರೆ, ಲಾಯಿಲ ತಾಲೂಕು ಪಂಚಾಯತ್ ಸದಸ್ಯರಾದ ಸುಧಾಕರ್ ಬಿ.ಎಲ್, ಸಂಧ್ಯಾ ಟ್ರೇಡರ್‍ಸ್ ಮಾಲಕರಾದ ರಾಜೇಶ್ ಪೈ, ಪೈ ಸ್ವೀಟ್ಸ್ ಮಾಲಕರಾದ ನಾರಾಯಣ ಪೈ, ಉದ್ಯಮಿ ನಾಗೇಶ್ ಪೈ, ವಿನಾಯಕ ರೈಸ್ ಮಿಲ್ ಇದರ ಮಾಲಕರಾದ ಶ್ರೀಕಾಂತ್ ಕಾಮತ್, ಚಂದ್ರಕಾಂತ್ ಕಾಮತ್, ಉದ್ಯಮಿ ವಿವೇಕಾನಂದ ಪ್ರಭು, ಜಾಗದ ಮಾಲಕರಾದ ದಾಸಪ್ಪ ಗೌಡ ಕಿಲ್ಲೂರು, ಮೊದಲಾದವರು ಉಪಸ್ಥಿತರಿದ್ದರು.
ಮಾಲಕ ಬಿ. ಶಶಿಧರ್ ಪೈ, ಹಾಗೂ ಪತ್ನಿ ಶ್ರೇಯಾ ಎಸ್.ಪೈ ಬಂದಂತಹ ಅತಿಥಿಗಳನ್ನು ಸತ್ಕರಿಸಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.