2 ತಿಂಗಳ ನಂತರ ಜೂ.8ರಂದು ತೆರೆಯಲಿರುವ ಧಾರ್ಮಿಕ, ವಾಣಿಜ್ಯ ಸಂಸ್ಥೆಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. 2 ಹಂತಗಳಲ್ಲಿ ಲಾಕ್ ಡೌನ್ ಅನ್ ಲಾಕ್ ಆಗಲಿದ್ದು, ಮೊದಲನೆ ಹಂತದಲ್ಲಿ ಧಾರ್ಮಿಕ ಸ್ಥಳಗಳು, ಹೊಟೇಲ್ಗಳು ಮತ್ತು ರೆಸ್ಟೋರೆಂಟ್ಗಳು ತೆರೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮಾರ್ಗಸೂಚಿಗಳು ಎಲ್ಲರೂ ಪಾಲಿಸಬೇಕಾದದ್ದು:
- ಆಗಾಗ 40ರಿಂದ 60 ಸೆಕೆಂಡುಗಳ ಕಾಲ ಕೈಗಳನ್ನು ಸೋಪುಗಳಿಂದ ತೊಳೆಯುತ್ತಿರಬೇಕು.
- ಕೆಮ್ಮುವಾಗ, ಸೀನುವಾಗ ಟಿಶ್ಯು, ಕರವಸ್ತ್ರಗಳಿಂದ ಮೂಗು, ಬಾಯಿಗಳನ್ನು ಮುಚ್ಚಬೇಕು, ಬಳಕೆಯಾದ ಟಿಶ್ಯುಗಳನ್ನು ಸರಿಯಾಗಿ ಎಸೆಯಬೇಕು.
- ಉಗುಳುವುದು ಸಂಪೂರ್ಣ ನಿಷಿದ್ಧ.
- ಶಾಪಿಂಗ್ ಮಾಲ್ ಗಳು ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಇರಲೇಬೇಕು.
- ಕೋವಿಡ್ 19ನ ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಬೇಕು.
- ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶ.
- ಕೋವಿಡ್ 19 ತಡೆಗಟ್ಟುವ ಕುರಿತು ಮಾಹಿತಿ ನೀಡುವ ಪೋಸ್ಟರ್ಗಳನ್ನು, ಫಲಕಗಳನ್ನು ಅಳವಡಿಸಬೇಕು.
- ಕೋವಿಡ್ 19 ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಡಿಯೋ ಮತ್ತು ವಿಡಿಯೋ ಕ್ಲಿಪ್ಗಳನ್ನು ಆಗಾಗ ಪ್ಲೇ ಮಾಡುತ್ತಿರಬೇಕು.
- ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ತಮ್ಮ ವಾಹನಗಳಲ್ಲಿ ಕಳಚುವುದು ಸೂಕ್ತ.
- ಅಗತ್ಯವಿದ್ದರೆ ಪ್ರತಿ ವ್ಯಕ್ತಿ ಅಥವಾ ಕುಟುಂಬದವರು ಅವುಗಳನ್ನು ಪ್ರತ್ಯೇಕ ಸ್ಲಾಟ್ಗಳಲ್ಲಿ ಇರಿಸಬೇಕು.
- ಪಾರ್ಕಿಂಗ್ ಸ್ಲಾಟ್ಗಳಲ್ಲಿ ಗುಂಪುಗಳನ್ನು ನಿಯಂತ್ರಿಸಬೇಕು ಮತ್ತು ಆವರಣದ ಹೊರಗೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಬಗ್ಗೆ ವ್ಯವಸ್ಥೆಗಳನ್ನು ಮಾಡಬೇಕು.
- ಆವರಣದಲ್ಲಿರುವ ಅಥವಾ ಹೊರಗಿರುವ ಯಾವುದೇ ಅಂಗಡಿಗಳು, ಸ್ಟಾಲ್ಗಳು, ಕೆಫೆಟೇರಿಯಾಗಳು ಇತ್ಯಾದಿ ಎಲ್ಲಾ ಸಮಯಗಳಲ್ಲೂ ಸುರಕ್ಷಿತ ಅಂತರಗಳನ್ನು ಪಾಲಿಸಲಾಗುತ್ತಿದೆಯೇ ಎಂದು ನೋಡಿಕೊಳ್ಳಬೇಕು.
- ಕ್ಯೂಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತ ಅಂತರಗಳನ್ನು ಪಾಲಿಸುವುದಕ್ಕಾಗಿ ಸೂಕ್ತ ಅಂತರದ ಮಾರ್ಕಿಂಗ್ಗಳನ್ನು ಮಾಡಬಹುದು.
- ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡಬೇಕು.
- ಪ್ರವೇಶಕ್ಕಾಗಿ ಕ್ಯೂಗಳಲ್ಲಿ ನಿಲ್ಲುವಾಗ ಕನಿಷ್ಠ 6 ಅಡಿ ಸುರಕ್ಷಿತ ಅಂತರವನ್ನು ಪಾಲಿಸಬೇಕು.
- ಆವರಣ ಪ್ರವೇಶಿಸುವುದಕ್ಕೆ ಮೊದಲು ಜನರು ಸಾಬೂನು ಮತ್ತು ನೀರು ಬಳಸಿ ತಮ್ಮ ಕೈ ಮತ್ತು ಕಾಲುಗಳನ್ನು ತೊಳೆದುಕೊಳ್ಳಬೇಕು.
- ಸುರಕ್ಷಿತ ಅಂತರ ನಿಯಮ ಪಾಲಿಸಿ ಆಸನದ ವ್ಯವಸ್ಥೆಗಳನ್ನು ಮಾಡಬೇಕು.
- ಏರ್ ಕಂಡಿಶನಿಂಗ್ ಮತ್ತು ವೆಂಟಿಲೇಶನ್ಗಾಗಿ ಏರ್ ಕಂಡಿಶನ್ ಗಳಲ್ಲಿ 24-30 ಡಿಗ್ರಿ ಸೆಲ್ಸಿಯಸ್ ಗಳ ಸರಾಸರಿಯಲ್ಲಿ ತಾಪಮಾನವನ್ನು ನಿಗದಿಗೊಳಿಸಬೇಕು ಎನ್ನುವ ಸಿಪಿಡಬ್ಲ್ಯುಡಿ ಮಾರ್ಗಸೂಚಿಗಳನ್ನು ಪಾಲಿಸಬೇಕು.
- ಶಾಪಿಂಗ್ ಮಾಲ್ಗಳಲ್ಲಿ ಎಲ್ಲಾ ಸಮಯಗಳಲ್ಲೂ ಫೇಸ್ ಮಾಸ್ಕ್ ಗಳನ್ನು ಬಳಸಬೇಕು.
- ಹೋಮ್ ಡೆಲಿವರಿ ಮಾಡಲು ಹೊರಡುವ ಮುನ್ನ ಸಿಬ್ಬಂದಿಯನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಬೇಕು.
- ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿಗಳ ಒಳಗಿರಲು ಅವಕಾಶ ನೀಡಬೇಕು.
- ಲಿಫ್ಟ್ ಗಳಲ್ಲಿ ಕಡಿಮೆ ಸಂಖ್ಯೆಯ ಜನರಿರಬೇಕು.
- ವಾಶ್ ರೂಮ್ಗಳನ್ನು ಸ್ವಚ್ಛಗೊಳಿಸುತ್ತಿರಬೇಕು.
- ಫುಡ್ ಕೋರ್ಟ್ ಮತ್ತು ರೆಸ್ಟಾರೆಂಟ್ಗಳಲ್ಲಿ 50 ಶೇಕಡಕ್ಕಿಂತ ಹೆಚ್ಚಿನ ಆಸನ ವ್ಯವಸ್ಥೆ ಮಾಡಬಾರದು.
- ಫುಡ್ ಕೋರ್ಟ್ ಸಿಬ್ಬಂದಿ ಮಾಸ್ಕ್ ಧರಿಸಿ, ಹ್ಯಾಂಡ್ ಗ್ಲೌಸ್ಗಳನ್ನು ಧರಿಸಬೇಕು.
- ಧಾರ್ಮಿಕ ಕೇಂದ್ರಗಳು
- ಪ್ರತಿಮೆಗಳು, ಮೂರ್ತಿಗಳು ಮತ್ತು ಪವಿತ್ರ ಗ್ರಂಥಗಳ್ನು ಮುಟ್ಟಬಾರದು.
- ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ರೆಕಾರ್ಡ್ ಮಾಡಿದ ಭಕ್ತಿಗೀತೆಗಳು, ಪ್ರಾರ್ಥನೆಗಳನ್ನು ಹಾಡಬೇಕು. ಒಟ್ಟಾಗಿ , ಗುಂಪಾಗಿ ಹಾಡುವುದಕ್ಕೆ ಅವಕಾಶವಿಲ್ಲ.
- ಸಾಮಾನ್ಯ ಪ್ರಾರ್ಥನೆಯ ಚಾಪೆಗಳನ್ನು ಬಳಸಲು ಅವಕಾಶವಿಲ್ಲ. ಪ್ರತಿಯೊಬ್ಬರು ಅವರದ್ದೇ ಆದ ಚಾಪೆಗಳನ್ನು ತರಬೇಕು.
- ಪ್ರಸಾದ ವಿತರಣೆ, ಪವಿತ್ರ ನೀರು ಸಿಂಪಡಣೆಗೆ ಅವಕಾಶವಿಲ್ಲ.
- ಕಮ್ಯುನಿಟಿ ಕಿಚನ್ಗಳು, ಧಾರ್ಮಿಕ ಸ್ಥಳಗಳಲ್ಲಿ ಅನ್ನದಾನ ಇತ್ಯಾದಿಗಳ ವೇಳೆ ಆಹಾರ ತಯಾರಿಸುವಾಗ ಮತ್ತು ವಿತರಿಸುವಾಗ ಸುರಕ್ಷಿತ ಅಂತರ ನಿಯಮಗಳನ್ನು ಪಾಲಿಸಬೇಕು.
- ಆವರಣದ ನೆಲವನ್ನು ಹಲವು ಬಾರಿ ಸ್ವಚ್ಛಗೊಳಿಸಬೇಕು.
- ಆವರಣದಲ್ಲಿ ಯಾವುದಾದರೂ ಶಂಕಿತ, ದೃಢಪಟ್ಟ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಇತರರಿಗಿಂತ ದೂರವಿರುವ ಕೋಣೆಯೊಂದರಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಇರಿಸಬೇಕು.
- ವೈದ್ಯರು ಪರೀಕ್ಷೆ ನಡೆಸುವವರಿಗೆ ಆ ವ್ಯಕ್ತಿಗೆ ಮಾಸ್ಕ್ ಗಳನ್ನು ನೀಡಬೇಕು.
- ಸ್ಥಳೀಯ ವೈದ್ಯಕೀಯ ಅಧಿಕಾರಿಗಳಿಗೆ, ರಾಜ್ಯ ಅಥವಾ ಜಿಲ್ಲಾ ಹೆಲ್ಪ್ ಲೈನ್ ಗಳಿಗೆ ತಕ್ಷಣ ಕರೆ ಮಾಡಬೇಕು.
- ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್.
- ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.
- ಹೊಟೇಲ್ ಗಳು ಪಾಲಿಸಬೇಕಾದ ಮಾರ್ಗಸೂಚಿಗಳು
- ಹೊಟೇಲ್ಗಳಿಗೆ ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇರಬೇಕು.
- ಯಾವುದೇ ಲಕ್ಷಣಗಳನ್ನು ಹೊಂದಿಲ್ಲದ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ.
- ಎಲ್ಲಾ ಸಿಬ್ಬಂದಿ ಮತ್ತು ಅತಿಥಿಗಳು ಮಾಸ್ಕ್ ಧರಿಸಬೇಕು.
- ಸುರಕ್ಷಿತ ಅಂತರ ನಿಯಮ ಪಾಲನೆಗಾಗಿ ಸಾಕಷ್ಟು ಜನರನ್ನು ನೇಮಿಸಬೇಕು.
- ಸಿಬ್ಬಂದಿಗಳು ಗ್ಲೌಸ್ ಧರಿಸಬೇಕು.
- ಹಿರಿಯ ಸಿಬ್ಬಂದಿ, ಗರ್ಭಿಣಿ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
- ಅವರು ಸಾರ್ವಜನಿಕವಾಗಿ ನೇರ ಸಂಪರ್ಕದಲ್ಲಿರುವ ಯಾವುದೇ ಕೆಲಸಗಳನ್ನು ಮಾಡಬಾರದು.
- ರೆಸ್ಟೋರೆಂಟ್ಗಳು ಪಾರ್ಸಲ್ ಸರ್ವಿಸ್ಗಳಿಗೆ ಆದ್ಯತೆ ನೀಡಬೇಕು. ಫುಡ್ ಡೆಲಿವರಿ ಸಿಬ್ಬಂದಿ ಗ್ರಾಹಕರ ಮನೆ ಬಾಗಿಲುಗಳಲ್ಲಿ ಪ್ಯಾಕೆಟ್ಗಳನ್ನು ಇರಿಸಬೇಕು.
- ನೇರವಾಗಿ ಗ್ರಾಹಕರ ಕೈಗೆ ಆಹಾರದ ಪ್ಯಾಕೇಟ್ಗಳನ್ನು ನೀಡಬೇಡಿ.
- ಹೋಮ್ ಡೆಲಿವರಿಗೂ ಮುನ್ನ ಡೆಲಿವರಿ ಸಿಬ್ಬಂದಿಯ ಥರ್ಮಲ್ ಸ್ಕ್ರೀನಿಂಗ್.
- ಶಾಪಿಂಗ್ ಮಾಲ್ಗಳಿಗೆ ಸೂಚಿಸಲಾದ ಸುರಕ್ಷೆಗೆ ಸಂಬಂಧಿಸಿದ ಇತರ ನಿಯಮಗಳನ್ನು ಧಾರ್ಮಿಕ ಕೇಂದ್ರಗಳು, ಹೊಟೇಲ್ಗಳು, ರೆಸ್ಟೋರೆಂಟ್ಗಳೂ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.