ಟಿಕ್-ಟಾಕ್ v/s ಯುಟ್ಯೂಬ್ ಆನ್ಲೈನ್ ಸಮರ….!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪ್ರಸ್ತುತ ಅಂತರ್ಜಾಲ ಲೋಕದಲ್ಲಿ ಟಿಕ್ – ಟಾಕ್ ಮತ್ತು ಯುಟ್ಯೂಬ್ ನಡುವಿನ ಯುದ್ದ ಭಾರಿ ಸಂಚಲನವನ್ನು ಮೂಡಿಸುತ್ತಿದೆ. ಒಂದು ಸಣ್ಣ ಕಿಡಿಯಿಂದ ಸೃಷ್ಟಿಯಾದ ಬೆಂಕಿಯೊಂದು ಈಗ ಕಾಡ್ಗಿಚ್ಚಿನಂತೆ ಹರಡಿ ಎಲ್ಲರ ಬಾಯಲ್ಲು ಇದೇ ವಿಷಯ ಕೇಳುವಂತಾಗಿದೆ.

2012ರಲ್ಲಿ ಚೈನಾದ ಕಂಪನಿ, ಬೈಟ ಡ್ಯಾನ್ಸ್ ಟಿಕ್-ಟಾಕ್ ಅಪ್ಲಿಕೇಶನ್ ಅನ್ನು ಪರಿಚಯಿಸಿತು. ಹಾಡುಗಳಿಗೆ,ಮಾತುಗಳಿಗೆ ತುಟಿ ಅಲ್ಲಾಡಿಸಿ, ಕುಣಿದು ಅಂತರ್ಜಾಲದಲ್ಲಿ ಬಿಡಲು ಹೊಸ ವೇದಿಕೆಯನ್ನು ಸೃಷ್ಟಿಮಾಡಿಕೊಟ್ಟಿತು. ಕೇವಲ ಮೂರೇ ವರ್ಷದಲ್ಲಿ 120 ದಶಲಕ್ಷ ಭಾರತೀಯರು ಇದನ್ನು ಡೌನ್ಲೋಡ್ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.

ಇನ್ನು ಯುಟ್ಯೂಬ್ ಗೂಗಲ್ ಒಡೆತನಕ್ಕೆ ಬಂದದ್ದು 2006 ರಲ್ಲಿ, ಅಲ್ಲಿಂದ ಇಲ್ಲಿಯವರೆಗು ಹಲವಾರು ಪ್ರತಿಭೆಗಳು ಭಾರತದ ಉದ್ದಗಲಕ್ಕು ಬೆಳಕಿಗೆ ಬಂದಿದೆ ಹಾಗು ಸುಮಾರು 265 ದಶಲಕ್ಷ ಭಾರತೀಯರು ತಿಂಗಳೊಂದರಲ್ಲಿ ಅದನ್ನು ಉಪಯೋಗಿಸುತ್ತಾರೆಂಬುದು ಗಮನಾರ್ಹ.

ಕೆಲವು ದಿನಗಳ ಹಿಂದೆ ಟಿಕ್-ಟಾಕ್ ಖ್ಯಾತಿಯ ಅಮೀರ್ ಸಿಧ್ದೀಕಿ ವೀಡಿಯೋ ಒಂದನ್ನು ಹರಿಬಿಟ್ಟನು.ಅದರಲ್ಲಿ ಟಿಕ್-ಟಾಕ್ ಹಾಗು ಯೂಟ್ಯೂಬ್ ಎರಡನ್ನು ಹೋಲಿಸಿ ಅದರಲ್ಲಿ ಟಿಕ್-ಟಾಕ್ ಮೇಲೆಂದು ಹಾಗು ಯುಟ್ಯೂಬರ್ಗಳು ಟಿಕ್-ಟಾಕ್ ವೀಡಿಯೋಗಳಿಂದ ವಿಷಯಗಳನ್ನು ಕದಿಯುತ್ತಾರೆಂದು ಹೇಳಿದನು ಇದು ಹಲವಾರು ಯುಟ್ಯೂಬರ್ಗಳನ್ನು ಕೆಣಕಿದಂತಾಗಿ ಅವರೆಲ್ಲರನ್ನು ಸಿಟ್ಟಿಗೆಬ್ಬಿಸಿತು. ಆದರೆ ಈ ಯುದ್ದಕ್ಕೆ ಹುರುಪು ಬಂದದ್ದು ಮಾತ್ರ ಕ್ಯಾರಿ ಮಿನಾಟಿಯ ವೀಡಿಯೊವಿನಿಂದ. ಸುಮಾರು 18.7 ದಶಲಕ್ಷ ಯುಟ್ಯೂಬ್ ಚಂದಾದಾರನ್ನು ಹೊಂದಿರುವ ಈ 20 ವರ್ಷದ ಹುಡುಗನ ವಿಡಿಯೊ 70 ದಶಲಕ್ಷ ವೀಕ್ಷಣೆಯನ್ನು ಹಾಗು 10 ದಶಲಕ್ಷ ಲೈಕ್ಗಳನ್ನು ಹೊಂದಿ ಭಾರತದ ಇತಿಹಾಸದಲ್ಲೆ ಮೊದಲು ಎಂದೆನಿಸಿತು. 13 ನಿಮಿಷದ ಆ ವೀಡಿಯೋದಲ್ಲಿ ಎಲ್ಲಾ ಟಿಕ್-ಟಾಕ್ ಪ್ರಿಯರ ಬಗ್ಗೆ ಅವನದ್ದೇ ಆದ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದ.ಆದರೆ ಯುಟ್ಯೂಬ್ ಈ ವೀಡಿಯೊವನ್ನು ಕೆಲವೇ ದಿನಗಳಲ್ಲಿ ಯುಟ್ಯೂಬಿನ ನಿಯಮ ಉಲ್ಲಂಘನೆ ಅಡಿಯಲ್ಲಿ ತೆಗೆದುಹಾಕಿತು.

ಟ್ವಟರ್,ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಬಹಳ ಚರ್ಚೆಗೆ ಒಳಪಟ್ಟು ಅನೇಕರು ಯುಟ್ಯೂಬಿಗೆ ಹಾಗು ಇನ್ನೂ ಕೆಲವರು ಟಿಕ್-ಟಾಕ್ಗೆ ತಮ್ಮ ಬೆಂಬಲವನ್ನು ನೀಡಿದರು. ಇದೇ ಸಂದರ್ಭದಲ್ಲಿ ಫೈಸಲ್ ಸಿದ್ದೀಕಿ ಎಂಬುವವನೊಬ್ಬನು ಎಸಿಡ್ ದಾಳಿಯನ್ನು ಪ್ರಚೋದಿಸುವಂತಹ ವೀಡಿಯೊವೊಂದನ್ನು ಟಿಕ್-ಟಾಕ್ನಲ್ಲಿ ಹರಿಬಿಟ್ಟನು.ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಯಿತು. ಈ ವಿಷಯ ಟಿಕ್-ಟಾಕ್ನ ಈಗಿನ ಪರಿಸ್ಧಿತಿಗೆ ಮೊದಲ ಏಟು ಎನ್ನಬಹುದು.

ಇಡೀ ಪ್ರಪಂಚಕ್ಕೆ ಕೊರೋನ ವೈರಸ್ ಅನ್ನು ನೀಡಿ ಎಲ್ಲರ ಸಿಟ್ಟಿಗೆ ಗುರಿಯಾಗಿರುವ ಚೀನಾದ ಯಾವುದೆ ಸಾಮಾಗ್ರಿಗಳನ್ನು ಭಾರತದಲ್ಲಿ ಉಪಯೋಗಿಸಬಾರದೆಂದು ಜನರು ತೀರ್ಮಾನಿಸಲಾರಂಭಿಸಿದರು. ಟಿಕ್-ಟಾಕ್ ಸಹ ಚೀನಾದ ಕಂಪನಿಯಾದ್ದರಿಂದ ಅದನ್ನು ನಿಷೇದಿಸಬೇಕೆಂದು ಎಲ್ಲಡೆ ಮಾತು ಕೇಳಿಬಂದವು.

ಅದಲ್ಲದೆ ಟಿಕ್-ಟಕ್ ಅಪ್ಲಿಕೇಷನ್ನಲ್ಲಿ ಹಲವಾರು ವೀಡಿಯೊಗಳು ಅತ್ಯಾಚಾರ, ಎಸಿಡ್ ದಾಳಿ,ಭಯೋತ್ಪಾದನೆಯನ್ನು ಪ್ರಚೋದಿಸುವಂತೆ ಚಿತ್ರೀಕರಿಸಲಾಗಿದೆ. ಈ ಅಪ್ಲಿಕೇಷನ್ನನ್ನು ಉಪಯೋಗಿಸುವವರು ಸುಮಾರು ೧೨ರಿಂದ – ೨೩ರವರಗಿನವರಾಗಿರುತ್ತಾರೆ ಹಾಗು ಇಂತಹ ವೀಡಿಯೊಗಳು ಅವರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಲ್ಲಾ ನೆಟ್ಟಿಗರು ಪ್ಲೇಸ್ಟೋರಿನಲ್ಲಿರುವ ಟಿಕ್ – ಟಾಕ್ ಅಪ್ಲಿಕೇಷನಿಗೆ ಅತೀ ಕಡಿಮೆ ಸಮೀಕ್ಷೆ (ಡಿevieತಿ) ಅನ್ನು ನೀಡಲಾರಂಭಿಸಿದರು.

ಇದರ ಫಲಿತಾಂಶವಾಗಿ, ಪ್ಲೇಸ್ಟೋರಿನಲ್ಲಿ ಬಹು ಎತ್ತರದಲ್ಲಿದ್ದ ಟಿಕ್-ಟಾಕ್ನ ಸಮೀಕ್ಷೆ ದಿನೇ ದಿನೇ ಕೆಳಗಿಳಿಯಲಾರಂಭಿಸಿತು.
16 ಮೇ 4.5 ಸ್ಟಾರ್ ರೇಟಿಂಗ್ ಹೊಂದಿದ್ದ ಟಿಕ್-ಟಾಕ್, 18ನೇ ಮೇ ಗೆ 3.9ಕ್ಕೆ ಇಳಿಯಿತು. ಕೊನೆಗೆ 20 ಮೇ ಸುಮಾರಿಗೆ 1.3 ಸ್ಟಾರ್ ರೇಟಿಂಗ್ ಪಡೆಯಿತು. ಇದರಿಂದ ಭಾರತದೆಲ್ಲೆಡೆ ಟಿಕ್-ಟಾಕ್ ವಿರೋಧಿಗಳು ಖುಷಿಪಟ್ಟರು ಹಾಗು ಇನ್ನೇನು ಟಿಕ್-ಟಾಕ್ ಭಾರತದಲ್ಲಿ ನಿಷೇದಿಸಲಾಗುತ್ತದೆ ಎಂದೇ ತಿಳಿದಿದ್ದಾರೆ.
ಆದರೆ…
ಈ ಅಂತರ್ಜಾಲ ನಾವೆಂದುಕೊಂಡಂತಲ್ಲ.ಅಲ್ಲಿ ನಮಗರಿವಿಲ್ಲದಂತೆ ತುಂಬಾ ಆಟಗಳು ನಡೆಯುತ್ತವೆ. ಕ್ಯಾರಿಮಿನಾಟಿಯ 70 ದಶಲಕ್ಷ ವೀಕ್ಷಣೆಗೊಂಡು ಹೊಸ ದಾಖಲೆ ಸೃಷ್ಟಿಸಿದ ಆ ವೀಡಿಯೊ ನಿಯಮ ಉಲ್ಲಂಘನೆ ಮಾಡುತ್ತದೆ ಎಂದು ಗೊತ್ತಿದ್ದರು ಸಹ ಏಕೆ ಯುಟ್ಯೂಬ್ ಕೆಲವು ದಿನಗಳ ತನಕ ಸುಮ್ಮನಿತ್ತು?
ಕೆಲವು ದಿನಗಳಲ್ಲಿ ಹಲವಾರು ದಾಖಲೆಗಳನ್ನು ಮುರಿದ ಮೇಲೆ ತಮಗೆ ಬರಬೇಕಾದ ಆದಾಯ ಬಂದ ಮೇಲೆ ಯು-ಟ್ಯೂಬ್ಗೆ ತಮ್ಮ ನಿಯಮದ ಬಗ್ಗೆ ಅರಿವಾಯಿತೋ?
ಇನ್ನು ಟಿಕ್-ಟಾಕ್ ಅನ್ನು ಭಾರತದಿಂದ ನಿಷೇದಿಸುವ ವಿಚಾರಕ್ಕೆ ಬಂದರೆ ಅದು ಅಷ್ಟು ಸುಲಭವಿಲ್ಲ.ಗೂಗಲ್ ತನ್ನ ನಿಯಮದ ಪ್ರಕಾರ, ಅನಿರೀಕ್ಷಿತ ದಾಳಿಗೆ ಒಳಪಟ್ಟ ಇಂತಹ ಅಪ್ಲಿಕೇಷನ್ನ ಇತ್ತೀಚಿಗಿನ ಸಮೀಕ್ಷೆಯನ್ನು ಹಂತ ಹಂತವಾಗಿ ಅಳಿಸಿಹಾಕುತ್ತದೆ.ಗೂಗಲ್ ಇಂತಹ ಅಪ್ಲಿಕೇಷನ್ನನ್ನು ನಿಷೇದಿಸಬಹುದು ಆದರೆ ಕೇವಲ 2-3 ದಿನಗಳಿಗೆ ಮಾತ್ರ,ಒಂದು ವೇಳೆ ಅದು ಪ್ಲೇಸ್ಟೋರಿನಿಂದ ಸಂಪೂರ್ಣವಾಗಿ ನಿಷೇದಿಸಬೇಕಾದರೆ ಸರ್ಕಾರ ಆ ಅಪ್ಲಿಕೇಷನ್ನನ್ನು ನಿಷೇದಿಸಬೇಕು ಇಲ್ಲವಾದಲ್ಲಿ ಅಂತಹ ಅಪ್ಲಿಕೇಷನ್ಗಳು ಸಮಾಜಕ್ಕೆ ತುಂಬಾ ಹಾನಿಕಾರಕವಾಗಿರಬೇಕು.

ಒಂದು ವೇಳೆ ಟಿಕ್-ಟಾಕ್ ಅನ್ನು ಗೂಗಲ್ ರಕ್ಷಿಸಲಿಲ್ಲ ಎಂದೇ ಇಟ್ಟಕೊಳ್ಳಿ, ಕೇವಲ ೩ ದಿನಗಳಲ್ಲಿ ಈ ಚೈನ ಕಂಪನಿಯ ಆದಾಯ ಎಷ್ಟಿರುತ್ತದೆಂದರೆ ತಮಗೆ ಅಗತ್ಯವಿರುವಷ್ಟು ಸಮೀಕ್ಷೆಗಳನ್ನು ದುಡ್ಡು ಕೊಟ್ಟು ಬರೆಸಿಕೊಂಡು ತಮಗೆ ಪ್ಲೇಸ್ಟೋರಿನಲ್ಲಿ ಬೇಕಾದ 4.5 ಸ್ಟಾರ್ ರೇಟಿಂಗ್ ಅನ್ನು ಗಿಟ್ಟಿಸಿಕೊಳ್ಲುತ್ತದೆ!
ಅದಕ್ಕೆ ಅಲ್ವ ಹೇಳೋದು…. Internet is so dirty  ಅಂತ.

                                                                                                                                                   ಶಿಶಿರ್ ರಘುಚಂದ್ರ ಧರ್ಮಸ್ಥಳ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.