HomePage_Banner_
HomePage_Banner_

ನಲಿಕೆ ಸಮಾಜ ಭವನದಲ್ಲಿ ಬಾಳೆಕೋಡಿ ಶ್ರೀ ಶ್ರದ್ಧಾಂಜಲಿ ಸಭೆ ದೈವ ನರ್ತಕರಿಗೆ ಕಿಟ್ ವಿತರಣೆ ಮೂಲಕ ವಿಶೇಷ ರೂಪ

ಪಣೆಜಾಲು; ನಲಿಕೆ ( ಪರಿಶಿಷ್ಟ ಜಾತಿ) ಸಮುದಾಯದ ಏಕೈಕ ಸ್ವಾಮೀಜಿ ವಿಟ್ಲ ಬಾಳೆಕೋಡಿ ಕನ್ಯಾನದ ಶ್ರೀ, ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ದೈವಾಧೀನರಾಗಿದ್ದು, ಈ ಬಗ್ಗೆ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಸಂಘದ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ ಕ್ರಮ ನಡೆಯಿತು.

ಕೊರೋನಾ ಮಹಾಮಾರಿ ಕಾಯಿಲೆಯಿಂದ ದೈವದ ನರ್ತನ ಸೇವೆ ಇಲ್ಲದೆ ಮನೆಯಲ್ಲೆ ಇದ್ದ ಹಿರಿಯ ಕಿರಿಯ ಅರ್ಹ 30 ಕುಟುಂಬಗಳಿಗೆ ತುಳು ಸಾಹಿತ್ಯ ಅಕಾಡೆಮಿ ಹಾಗೂ ತಾಲೂಕು ಸಂಘದ ಜಂಟಿ ಆಶ್ರಯದಲ್ಲಿ ಆಹಾರ ಪದಾರ್ಥಗಳ ಕಿಟ್ ಗಳನ್ನೂ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್. ಪ್ರಭಾಕರ‌ ಓಡಿಲ್ನಾಳ, ನಲಿಕೆಯವರ ಜಿಲ್ಲಾ ದೈವಾರಾಧನ ಸಮಿತಿಯ ಅಧ್ಯಕ್ಷ ಜನಾರ್ದನ ಬುಡೋಳಿ, ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಅರುವ, ಉಪಾಧ್ಯಕ್ಷ ರಾಮು ಶಿಶಿಲ, ಸಮಿತಿಯ ಸದಸ್ಯರಾದ ವಿನಯ್, ವಿಜಯ್ ಮತ್ತು ಸಂತು ನಾರವಿ, ಯುವ ವೇದಿಕೆಯ ಅಧ್ಯಕ್ಷ ಹರೀಶ್ ನಾವುರ ಹಾಗೂ ಹಿರಿಯ ದೈವನರ್ತನ ಕಲಾವಿದ ಕಾಂತಪ್ಪ ವೇಣೂರು ವೇದಿಕೆಯಲ್ಲಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಸ್ವಾಗತಿಸಿ, ಶಶಿಕಾಂತ ಕೊಲ್ಲಿ ಧನ್ಯವಾದವಿತ್ತರು. ಸಮಾಜ ಭಾಂದವರು ಉಪಸ್ದಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.