ಬೆಳ್ತಂಗಡಿ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿದ್ದ ನಾವೂರು ಗ್ರಾಮದ ನಿವಾಸಿ ಅಚ್ಚುತ ನಾಯಕ್ ಏ.30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
1983 ರಲ್ಲಿ ನಾವೂರು ಅಂಚೆ ಕಚೇರಿಗೆ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಸೇರಿದ ಇವರು 6 ವರ್ಷ ಸೇವೆ ಸಲ್ಲಿಸಿದ ಬಳಿಕ 1991 ರಲ್ಲಿ ಪೋಸ್ಟ್ ಮ್ಯಾನ್ ಆಗಿ ಭಡಿಗೊಂಡು ನಿಟ್ಟೆಗೆ ವರ್ಗಾವಣೆಗೊಂಡರು. ಅಲ್ಲಿಂದ 1996 ರಲ್ಲಿ ಮೂಡಬಿದ್ರೆ, 1997 ರಲ್ಲಿ ಸುಳ್ಯ ಅಂಚೆ ಕಚೇರಿಗೆ ಅಂಚೆ ಸಹಾಯಕರಾಗಿ ವರ್ಗಾವಣೆಗೊಂಡರು. 2002 ರಲ್ಲಿ ಅಲ್ಲಿಂದ ಸಂಪಾಜೆಗೆ, 2006 ರಲ್ಲಿ ಬೆಳ್ಳಾರೆಗೆ, 2010 ರಲ್ಲಿ ಧರ್ಮಸ್ಥಳಕ್ಕೆ, ನಂತರದ ಒಂದು ತಿಂಗಳಲ್ಲಿ ಉಜಿರೆಗೆ, 2013 ರಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜು ಪೋಸ್ಟ್ ಆಫೀಸ್ಗೆ ಪೋಸ್ಟ್ ಮಾಸ್ಟರ್ ಆಗಿ ವರ್ಗಾವಣೆಗೊಂಡರು. 2017ರಲ್ಲಿ ಬೆಳ್ತಂಗಡಿ ಅಂಚೆ ಕಚೇರಿಗೆ ಅಂಚೆ ಸಹಾಯಕರಾಗಿ ವರ್ಗಾವಣೆಗೊಂಡ ಅವರು 2020 ಎಪ್ರಿಲ್ ಕೊನೆಯಲ್ಲಿ ನಿವೃತ್ತರಾದರು.
ಇವರ ಪತ್ನಿ ಶ್ರೀಮತಿ ಚಂದ್ರಕಲಾ ರವರು ಬಂಗಾಡಿ ಸ.ಪ್ರೌ.ಶಾಲಾ ಶಿಕ್ಷಕಿಯಾಗಿದ್ದು, ಪುತ್ರ ಅಭೀಷ್ಟ ಎನ್ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.