HomePage_Banner_
HomePage_Banner_
HomePage_Banner_

ಎಸ್.ಡಿ.ಎಮ್ ಕಾಲೇಜು ಎಂಎಸ್ ಡಬ್ಲ್ಯೂ ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ.ಸಿ ರಿಗೆ ಪಿ.ಹೆಚ್.ಡಿ ಪದವಿ

Advt_NewsUnder_1

ಉಜಿರೆಯ ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ. ಸಿ. ಅವರಿಗೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಪಿ. ಹೆಚ್. ಡಿ. ಪದವಿಯನ್ನು ನೀಡಿ ಗೌರವಿಸಿದೆ.

ಅವರು ಮಂಡಿಸಿರುವ “ಎಸ್ಟಡಿ ಆನ್ ವರ್ಕ್ ಲೈಫ್ ಬ್ಯಾಲೆನ್ಸ್ ಓಫ್ ಕೆ. ಎಸ್.ಆರ್. ಟಿ. ಸಿ. ಡ್ರೈವರ್ಸ್ ವಿಥ್ ಸ್ಪೆಷಲ್ ರೆಫೆರೆನ್ಸ್ ಟು ಮೈಸೂರು ಡಿವಿಷನ್” ಎನ್ನುವ ಮಹಾ ಪ್ರಬಂಧಕ್ಕೆ ಈ ಗೌರವ ನೀಡಲಾಗಿದೆ.

ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಸಂಶೋಧನಾ ವಿಭಾಗದ ಪ್ರೊಫೆಸರ್ ಹಾಗು ಚೇರ್ಮನ್ ಡಾ. ಪರಶುರಾಮ ಕೆ. ಜಿ. ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಅವರು ರಚಿಸಿದ್ದಾರೆ.

ಮೂಡಿಗೆರೆ ತಾಲೂಕು ಬೀರ್ಗೂರಿನ ಎಸ್. ಚಂದ್ರೆಗೌಡ ಹಾಗೂ ಬಿ. ಎಮ್. ಇಂದ್ರಮ್ಮ ದಂಪತಿ ಪುತ್ರಿಯಾಗಿರುವ ಅವರು, ಉಜಿರೆ ಎಸ್. ಡಿ. ಎಂ. ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಶೈಲೇಶ್ ಕುಮಾರ್ ಅವರ ಧರ್ಮಪತ್ನಿಯಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.