HomePage_Banner_
HomePage_Banner_

ಬಳಂಜ ಕ್ವಾರೆಂಟೈನ್‌ನಲ್ಲಿದ್ದ 10 ಮಂದಿಯ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಬಳಂಜ ಗ್ರಾ.ಪಂ ವ್ಯಾಪ್ತಿಯ ಬಳಂಜ ಶಾಲೆ ಹಾಗೂ ಪೆರೋಡಿತ್ತಾಯ ಕಟ್ಟೆ ಶಾಲೆಯಲ್ಲಿದ್ದ 10 ಮಂದಿಯ ಕೊವೀಡ್-19 ರ ವರದಿ ನೆಗೆಟಿವ್ ಬಂದಿದ್ದು ಅವರನ್ನು ಜೂ.1 ರಂದು ಬಿಡುಗಡೆಗೊಳಿಸಲಾಯಿತು.

ಬಳಂಜ ಶಾಲೆಯಲ್ಲಿ ಮುಂಬೈಯಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ 10 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದ್ದು ಮಂಗಳೂರಿನ ಕೊವೀಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ೮ ಮಂದಿಯ ಕೊರೋನಾ ಪರೀಕ್ಷೆ ನಡೆಸಿದ್ದು ಎಲ್ಲರ ವರದಿಯು ನೆಗೆಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ.


ಪೆರೋಡಿತ್ತಾಯಕಟ್ಟೆಯಲ್ಲಿ ತಮಿಳುನಾಡಿನಿಂದ ಆಗಮಿಸಿ ಕ್ವಾರೆಂಟೈನ್‌ನಲ್ಲಿದ್ದ 2 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ವರದಿ ನೆಗೆಟಿವ್ ಬಂದಿದ್ದು ಇಬ್ಬರನ್ನು ಕೂಡ ಬಿಡುಗಡೆಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ ನ ಅಭಿವೃದ್ದಿ ಅಧಿಕಾರಿ ಸುಧಾಮಣಿ, ಆರೋಗ್ಯ ಸಹಾಯಕಿರಾದ ಮೋಹಿನಿ, ಮಮತಾ, ಆಶಾ ಕಾರ್ಯಕರ್ತೆಯರಾದ ಮಂಗಳ ದೇವಾಡಿಗ, ಸವಿತಾ, ಗುಲಾಬಿ, ರೇವತಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.