ಸುದೀರ್ಘ 38 ವರ್ಷಗಳ ಕಾಲ ಸೇವೆ; ಮಿತ್ತಬಾಗಿಲು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ದೇವಕಿ ಯು ನಿವೃತ್ತಿ

ಮಿತ್ತಬಾಗಿಲು: ಮಿತ್ತಬಾಗಿಲು ಸ.ಹಿ.ಪ್ರಾ.ಶಾಳೆಯ ಮುಖ್ಯ ಶಿಕ್ಷಕಿ ದೇವಕಿ ಯು ವೃತ್ತಿಯಿಂದ ನಿವೃತ್ತಿ ಹೊಂದಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ 1982 ರಲ್ಲಿ ಮಿತ್ತಬಾಗಿಲು ಶಾಲೆಯಲ್ಲಿ 10 ವರ್ಷ ಶಿಕ್ಷಕಿಯಾಗಿ, 1992-93 ರಲ್ಲಿ ಬಂಗಾಡಿ ಹಿ.ಪ್ರಾ ಶಾಲೆಯಲ್ಲಿ, 2005-06 ರಲ್ಲಿ ಮಿತ್ತಬಾಗಿಲು ಶಾಲೆಯಲ್ಲಿ ಶಿಕ್ಷಕಿಯಾಗಿ ನಂತರ ಪದನೋತ್ತಿಗೊಂಡು 2020 ರವರೆಗೆ ಸುದೀರ್ಘ 38 ವರ್ಷಗಳ ಕಾಲ ಶಿಕ್ಷಕಿ ವೃತ್ತಿಯನ್ನು ನಡೆಸಿ ನಿವೃತ್ತಿಯಾದರು.

ಶಾಲೆಯಲ್ಲಿ ಮಕ್ಕಳಿಗೆ ನೆಚ್ಚಿನ ಶಿಕ್ಷಕಿಯಾದ ಇವರು ಸ್ಕೌಟ್ಸ್& ಗೈಡ್ಸ್ ನಲ್ಲಿದ್ದು, ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಕ್ರೀಯಾಶೀಲರಂತೆ ಮಾಡುವಲ್ಲಿ ಶ್ರಮವಹಿಸಿದ ದೇವಕಿ ಯು ರವರಿಗೆ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ದೊರೆಕಿತು.

ಪ್ರಸ್ತುತ ಇವರು ಮಿತ್ತಬಾಗಿಲು, ಕಾಜೂರು ಮನೆಯಲ್ಲಿ ಪತಿ ತುಂಗಪ್ಪ ಪೂಜಾರಿ ಹಾಗೂ 2 ಮಕ್ಕಳಾದ ಅವಿನಾಶ್ ಮತ್ತು ಅಭಿಲಾಶ್ ರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.