ವಿದ್ಯುದಾಘಾತ ಉಜಿರೆಯ ಎ.ಸಿ ಮೆಕ್ಯಾನಿಕ್ ಮುಹಮ್ಮದ್ ಸಿರಾಜುದ್ದೀನ್ ನಿಧನ

ಉಜಿರೆ; ಇಲ್ಲಿನ ಅತ್ತಾಜೆ ನಿವಾಸಿ,ಉಜಿರೆಯಲ್ಲಿ ಎ.ಸಿ ಮೆಕ್ಯಾನಿಕ್ ಮಳಿಗೆ ನಡೆಸುತ್ತಿದ್ದ ಮುಹಮ್ಮದ್ ಸಿರಾಜುದ್ದೀನ್ ಅವರು ಇಂದು (ಜೂ.1) ರಂದು ಧಾರುಣವಾಗಿ ಅಸುನೀಗಿದ್ದಾರೆ.

ಕಕ್ಕಿಂಜೆಯ ಸಂಬಂಧಿಕರ ಮನೆಯಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಈ ಅವಘಡ ಆಗಿದೆ ಎನ್ನಲಾಗಿದೆ.

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆ ಮತ್ತು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಲಾಯಿತಾದರೂ ಅದಾಗಲೇ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತದೇಹ ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.