HomePage_Banner_
HomePage_Banner_
HomePage_Banner_

ಮಳೆಯ ಆರ್ಭಟ: ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ : ಎಸ್ ಡಿ ಪಿ ಐ ಎಚ್ಚರಿಕೆ

Advt_NewsUnder_1

ಬೆಳ್ತಂಗಡಿ: ಮೇ.31ರಂದು ತಾಲೂಕು ವ್ಯಾಪ್ತಿಯ ಕಿಲ್ಲೂರು, ಕಾಜೂರು, ಮಿತ್ತಬಾಗಿಲು, ಮಲವಂತಿಗೆ ಪರಿಸರದಲ್ಲಿ ಬಂದ ಮಳೆಯಿಂದ ಸಂಪೂರ್ಣ ನೀರು ತುಂಬಿ ಕೆಲವು ಮನೆಗಳಿಗೆ ಹಾನಿ ಸಂಭವಿಸಿದೆ.ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಕಳೆದ ವರ್ಷ ನೆರೆಯಲ್ಲಿ ಕೊಚ್ಚಿ ಬಂದ ಮರಗಳು, ಕಲ್ಲುಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಸೇತುವೆಬದಿ ಮತ್ತು ತೋಟಗಳಲ್ಲಿ ಬಾಕಿ ಉಳಿದಿದೆ. ಅವುಗಳು ಈ ಬಾರಿಯ ಮಳೆನೀರಿನಲ್ಲಿ ಕೊಚ್ಚಿ ಹೋದರೆ ಸೇತುವೆಗೆ ಮತ್ತು ತೋಟಗಳಿಗೆ ಇನ್ನಷ್ಟು ಹಾನಿಯಾಗಲಿಕ್ಕಿದೆ. ಕೆಲವು ರಸ್ತೆಗಳ ಕಾಮಗಾರಿ ಮಾಡಿ ಚರಂಡಿ ವ್ಯವಸ್ಥೆಯನ್ನು ಮಾಡದಿರುವುದರಿಂದ ನೀರು ಸರಿಯಾಗಿ ಹರಿಯದೆ ತೋಟಗಳಿಗೆ ಮತ್ತು ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಅಲ್ಲಿನ ಗ್ರಾಮಸ್ಥರಿಗೆ ನಾಶ-ನಷ್ಟ ಸಂಭವಿಸಿ ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿಯು ಅಧಿಕಾರಿಗಳನ್ನು ಎಚ್ಚರಿಸಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.