ಪೊಲೀಸ್ ಇಲಾಖೆಯಿಂದ ಗೃಹರಕ್ಷಕ ಸಿಬ್ಬಂದಿ ಕೈಬಿಟ್ಟ ಸರಕಾರ; ಸಿಐಟಿಯು ತೀವ್ರ ಆಕ್ರೋಶ

ಬೆಳ್ತಂಗಡಿ: ಹಲವಾರು ವರ್ಷಗಳಿಂದ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕದಳ ಸಿಬ್ಬಂದಿಗಳನ್ನು ಕರ್ತವ್ಯದಿಂದ ರಾಜ್ಯ ಸರ್ಕಾರ ಜೂನ್ 1 ಮುಕ್ತಗೊಳಿಸಿ ಆದೇಶಿಸುವ ಮೂಲಕ ದ್ರೋಹ ಎಸಗಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಆರೋಪಿಸಿದೆ.

ಗೃಹ ರಕ್ಷಕದಳದ ಸಿಬ್ಬಂದಿಗಳು ಹಗಲು ರಾತ್ರಿ , ಮಳೆ ,ಗಾಳಿ, ಬಿಸಿಲು ಎನ್ನದೆ ಪೊಲೀಸ್ ಠಾಣೆಗಳಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು. ಈಗ ಏಕಾಏಕಿ ರಾಜ್ಯ ಸರ್ಕಾರ ಅವರನ್ನು ಠಾಣೆಗಳ ಸೇವೆಯಿಂದ ಕಿತ್ತೆಸೆಯುವ ಮೂಲಕ ಬೀದಿಗೆಸೆಯುತ್ತಿರುವುದು ಖಂಡನೀಯ. ಅತ್ಯಂತ ಬಡ ಕುಟುಂಬಗಳಿಗೆ ಸೇರಿದ ವಿದ್ಯಾವಂತ ನಿರುದ್ಯೋಗಿ ಯುವಕ / ಯುವತಿಯರ ಉದ್ಯೋಗಕ್ಕಾಗಿ ಗೃಹ ರಕ್ಷಕದಳದಲ್ಲಿ ದುಡಿಯುತ್ತಿದ್ದರು. ಇದರಿಂದಾಗಿ ಹಲವು ಕುಟುಂಬಗಳು ಜೀವನ ನಡೆಸುತ್ತಿದ್ದರು. ಆದರೆ ರಾಜ್ಯ ಸರ್ಕಾರ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಅವರ ಸೇವೆಯನ್ನು ಶ್ಲಾಘಿಸುವ ಬದಲಾಗಿ ಕೊರೋನಾ ವೈರಸ್ ಗಿಂತಲೂ ಭೀಕರವಾಗಿ ಅವರ ಅನ್ನದ ಬಟ್ಟಲನ್ನು ಕಸಿಯುವ ಮೂಲಕ ದ್ರೋಹ ಬಗೆದಿದೆ. ಸರ್ಕಾರ ತನ್ನ ನೀತಿಯನ್ನು ಬದಲಾಯಿಸಿ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ಉದ್ಯೋಗಕ್ಕೆ ನಿಯೋಜಿಸಿ ಹಿತ ರಕ್ಷಣೆ ಮಾಡಬೇಕು ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್ ಎಸ್. ಎಂ , ಕಾರ್ಯದರ್ಶಿ ವಸಂತ ನಡ , ಉಪಾಧ್ಯಕ್ಷ ಶೇಖರ್ ಲಾಯಿಲ ಎಚ್ಚರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.