HomePage_Banner_
HomePage_Banner_

ಶ್ರೀ ರಾಮ ಕ್ಷೇತ್ರಕ್ಕೆ ಯುವ ವಾಹಿನಿ ವತಿಯಿಂದ ಸ್ಯಾನಿಟ್ಯಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಮೇ.30 ರಂದು ಕನ್ಯಾಡಿ ಶ್ರೀ ರಾಮಕ್ಷೇತ್ರಕ್ಕೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು. ನಂತರ ಕನ್ಯಾಡಿ ಶ್ರೀ ರಾಮಕ್ಷೇತ್ರದ ಸ್ವಾಮೀಜಿಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ ವಿಶ್ವಕ್ಕೆ ಬಂದಿರುವ ಕೊರೊನ ಮಹಾಮಾರಿ ರೋಗವು ಅದೃಷ್ಟು ಬೇಗ ಮುಕ್ತವಾಗಲಿ ಸಾರ್ವಜನಿಕರು ಈ ಬಗ್ಗೆ ಜಾಗೃತಿ ಯಿಂದ ಇರಬೇಕೆಂದು ಸಂದೇಶ ನೀಡಿದರು.

ಈ ಸಂಧರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಅದ್ಯಕ್ಷರಾದ ಎಂ‌.ಕೆ ಪ್ರಸಾದ್, ಉಪಾಧ್ಯಕ್ಷರಾದ ದೇವಿಪ್ರಸಾದ್ ಬರೆಮೇಲು, ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ, ಕೋಶಾಧಿಕಾರಿ ಸಂತೋಷ್ ಕಾಶಿಬೆಟ್ಟು, ಘಟಕದ , ನಿರ್ಧೇಶಕರಾದ ಉದಯ್ ಬಂಗೇರ ನಾವೂರು, ಸಂಘಟನಾ ಕಾರ್ಯದರ್ಶಿಗಳಾದ ಸುರೇಂದ್ರ ಕೋಟ್ಯಾನ್, ಯಶೋಧರ ಮುಂಡಾಜೆ ಘಟಕದ ಸಲಹೆಗಾರರಾದ ರವಿಕುಮಾರ್ ಬರೆಮೇಲು, ಪ್ರಶಾಂತ್ ಜಶನ್, ಪುರುಷೋತ್ತಮ ಧರ್ಮಸ್ಥಳ,ಉಮನಾಥ್ ಕೋಟ್ಯಾನ್ ಬೆಳಾಲು,ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ಪ್ರಶಾಂತ್ ಮಚ್ಚಿನ ,ಶಿವ ಕುಲಾಲ್ ಪಡಂಗಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.