HomePage_Banner_
HomePage_Banner_
HomePage_Banner_

ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲ್ಲ ಎಂದ ಸಿಎಂ ಬಿ.ಎಸ್.ಯಡಿಯೂರಪ್ಪ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರಲಿವೆ

Advt_NewsUnder_1

ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಸಿದ ಬಳಿಕ ಪ್ರತಿ ಭಾನುವಾರ ಜಾರಿಗೊಳಿಸಿದ್ದ ಕಂಪ್ಲೀಟ್ ಲಾಕ್‍ಡೌನ್ (ಕಫ್ರ್ಯೂ) ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರವುಗೊಳಿಸಿದ್ದಾರೆ.

ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾನುವಾರ (ಮೇ 31)ದಂದು ಕಂಪ್ಲೀಟ್ ಲಾಕ್‍ಡೌನ್ ಇರುವುದಿಲ್ಲ. ಆದ್ದರಿಂದ ಎಲ್ಲಾ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರುತ್ತವೆ’ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಭಾನುವಾರ ಕಂಪ್ಲೀಟ್ ಲಾಕ್‍ಡೌನ್ ಜಾರಿಯಲ್ಲಿದ್ದರಿಂದ ಶನಿವಾರ ಸಂಜೆ 7 ರಿಂದ ಆರಂಭವಾಗಿ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಕಂಪ್ಲೀಟ್ ಲಾಕ್‍ಡೌನ್ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಭಾನುವಾರದ ಲಾಕ್‍ಡೌನ್ ತೆರವುಗೊಳಿಸಿರುವುದರಿಂದ ಎಂದಿನಂತೆ ಶನಿವಾರ ಸಂಜೆ 7ರ ನಂತರ ನಿಷೇಧವಿರುತ್ತದೆ. ಹಾಗೆಯೇ ಭಾನುವಾರ ಸಂಜೆ 7 ಗಂಟೆಯ ನಂತರ ಓಡಾಟಕ್ಕೆ ನಿರ್ಬಂಧವಿರುತ್ತದೆ. ಒಟ್ಟಿನಲ್ಲಿ ವಾರಪೂರ್ತಿ ಸಂಜೆ 7ರ ನಂತರ ಸಂಚಾರಕ್ಕೆ ನಿಷೇಧವಿರುತ್ತದೆ.

ಭಾನುವಾರ ರಜಾ ದಿನವಾದ ಕಾರಣ ಜನರ ಓಡಾಟ ವಿಪರೀತಕ್ಕೆ ಏರಬಹುದು ಎಂಬ ಕಾರಣಕ್ಕೆ ಭಾನುವಾರ ಕಂಪ್ಲೀಟ್ ಲಾಕ್‍ಡೌನ್ ಹೇರುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.