HomePage_Banner_
HomePage_Banner_

ಕುಸಿದು ಬಿದ್ದ ಕುಕ್ಕುಜೆ ಸೇತುವೆಗೆ ಸಿಕ್ಕಿತು ಮುಕ್ತಿ* ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ

ನಾರಾವಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ಕುತ್ಲೂರು ಗ್ರಾಮದ ಕುಕ್ಕುಜೆ ಎಂಬಲ್ಲಿ ಕುಸಿದು ಬಿದ್ದ ಕುಕ್ಕುಜೆ ಸೇತುವೆಯನ್ನು ವೀಕ್ಷಿಸಲು ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಮೇ.29 ರಂದು ಭೇಟಿ ನೀಡಿದರು.

ತಾತ್ಕಾಲಿಕ ಸೇತುವೆಯ ದುರಸ್ಥಿಯನ್ನು ನಾಳೆಯಿಂದಲೇ ಪ್ರಾರಂಭಿಸಲು ಶೀಘ್ರ ಕ್ರಮ ಕೈಗೊಂಡು ಅದೇ ರೀತಿ ಮುಂದಿನ ಮಳೆಗಾಲದ ನಂತರ 3 ಕೋಟಿ  ವೆಚ್ಚದಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲು ಅನುದಾನವನ್ನು ನೀಡುವುದರ ಮೂಲಕ ಜನರಿಗೆ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸೇತುವೆ ದುರಸ್ಥಿಯ ಕಾಮಗಾರಿಯನ್ನು ನಡೆಸುವ ಮುಗ್ರೋಡಿ ಕನ್ಸ್ಟ್ರಕ್ಷನ್ ನ ಕಂಟ್ರಾಕ್ಟರ್  ಸುಧಾಕರ್ ಶೆಟ್ಟಿ, ಇಂಜಿನಿಯರ್ ಉದಯ್ ಕುಮಾರ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ  ಜಯಂತ್ ಕೋಟ್ಯಾನ್, ನಾರಾವಿ ಗ್ರಾಮ ಪಂಚಾಯತ್ ನ ಸದಸ್ಯ ಉದಯ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತರಾದ  ರಾಮಚಂದ್ರ ಭಟ್, ನಾರಾವಿ ಗ್ರಾಮ ಪಂಚಾಯತ್ ಸದಸ್ಯೆ  ಪ್ರಮೀಳಾ ಭಟ್, ರವೀಶ್ ಕುತ್ಲೂರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.