HomePage_Banner_
HomePage_Banner_

ಪಡಂಗಡಿ ಪ್ರಾ.ಕೃ.ಪ.ಸ. ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಸಹಾಯ * ಕೋವಿಡ್-19 ಸಿಎಂ ಪರಿಹಾರ ನಿಧಿಗೂ ಸಂಘದಿಂದ ರೂ.10 ಸಾವಿರ ದೇಣಿಗೆ

ಪಡಂಗಡಿ : ಕೊರೊನಾ ವೈರಸ್ ವೈದ್ಯಕೀಯ ಚಿಕಿತ್ಸಾ ನಿರ್ವಾಹಣೆಗಾಗಿ ಆರಂಭವಾದ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 10 ಸಾವಿರ ರೂಪಾಯಿ ದೇಣಿಗೆ ಹಾಗೂ ಪಡಂಗಡಿ, ಗರ್ಡಾಡಿ ಭಾಗದ ಆಶಾ ಕಾರ್ಯಕರ್ತೆಯರಿಗೆ ಸಂಘವು ಆರ್ಥಿಕ ಸಹಾಯ ಒದಗಿಸಿದೆ.

ಕೊರೊನಾ ವೈರಸ್ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯ ಸಮೀಕ್ಷೆಯಲ್ಲಿ ತೊಡಗಿರುವ ಪಡಂಗಡಿ ಗರ್ಡಾಡಿ ಭಾಗದ ಆಶಾ ಕಾರ್ಯಕರ್ತೆಯರಾದ ಶೀಲಾ ರೈ, ಜಯಶ್ರೀ, ಚಿನ್ನಮ್ಮ, ಚಂದ್ರಿಕಾ, ಹೇಮಾವತಿ, ಗೀತಾ ಆವರಿಗೆ ತಲಾ ರೂ.2000ಯಂತೆ ಒಟ್ಟು ರೂ12000ಯನ್ನು ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್ ಸೊಸೈಟಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರತೀತ್ ಅಜಿಲ, ಸಂಘದ ಉಪಾಧ್ಯಕ್ಷ ಶಂಕರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಕೇಶಿನಿ, ನಿರ್ದೇಶಕರಾದ ಕೃಷ್ಣಪ್ಪ, ಸುನೀತಾ, ಲೀಯೋ ಸಿಕ್ವೇರಾ, ಉಮಾವತಿ, ಕಿಶೋರ್, ಹಸೈನಾರ್ ಬ್ಯಾಂಕಿನ ಸಿಬ್ಬಂದಿಗಳಾದ ಸುಜಯಾ,ಉಮೇಶ್, ಆನಂದ, ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.