ಕಳೆಂಜ: ನಂದಗೋಕುಲ ಗೋಶಾಲೆ ಉದ್ಘಾಟನೆ

ಕಳೆಂಜ: ಇಲ್ಲಿನ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ‌ ಟ್ರಸ್ಟ್ ಇದರ ನೇತೃತ್ವದಲ್ಲಿ ಬಂಡೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ನಂದಗೋಕುಲ ಗೋ‌ಶಾಲೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇ.29 ರಂದು ಉದ್ಘಾಟಿಸಿದರು.

ನಂದಗೋಕುಲ ಗೋಶಾಲೆಯಲ್ಲಿ ಗೋವುಗಳ ರಕ್ಷಣೆ, ನಿರ್ಗತಿಕ, ಅನಾಥ ಹಾಗೂ ಅಶಕ್ತ ಗೋವುಗಳ ರಕ್ಷಣೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಿದೆ ‌ಎಂದು‌ ಶಾಸಕ ಹರೀಶ್ ಪೂಂಜಾ ತಿಳಿಸಿದರು.

ಈ‌ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಬಾರ್ಯ, ಶ್ರೀನಿವಾಸ್ ರಾವ್, ಟ್ರಸ್ಟ್‌ ನ ಅಧ್ಯಕ್ಷ ಉಜಿರೆ ದಂತ ವೈದ್ಯ ಡಾ.ಎಂ.ಎಂ ದಯಾಕರ್, ಹಿರಿಯ ನ್ಯಾಯವಾದಿ, ತಾ.ವಿ.ಹಿಂ.ಪ.ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ನವೀನ್ ನೆರಿಯ, ಹಾಗೂ ಸ್ಥಳ ದಾನಿಗಳಾದ ಗೋಪಾಲ್ ಕೃಷ್ಣನ್ ನಾಯರ್, ವಿ.ಹಿಂ.ಪ.ಕಾರ್ಯಧ್ಯಕ್ಷ ಭಾಸ್ಕರ ಧರ್ಮಸ್ಥಳ, ವೈದ್ಯ ಡಾ. ಮುರಳಿ ಕೃಷ್ಣ ಇರ್ವತ್ರಾಯ, ಕೃಷಿಕಾರದ ರಮೇಶ್‌ ಪ್ರಭು, ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಕಳೆಂಜ ಗ್ರಾ.ಪಂ ಅಧ್ಯಕ್ಷೆ ಶಾರದ, ಪಂ.ಸದಸ್ಯ ಹರೀಶ್ ಕೆ.ಬಿ, ಧನಂಜಯ ಗೌಡ, ಪದ್ಮನಾಭ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.