HomePage_Banner_
HomePage_Banner_
HomePage_Banner_

ಜೂ.1ಕ್ಕೆ ಕೇರಳ ಪ್ರವೇಶಿಸಲಿದೆ ಮಾನ್ಸೂನ್ ಮಳೆ * ಜೂ.6ಕ್ಕೆ ಮುನ್ಸೂಚನೆಯಿದ್ದ ಮುಂಗಾರು ಮಳೆ 5 ದಿನ ಮೊದಲೇ ಶುರು!

Advt_NewsUnder_1

ಕೊಚ್ಚಿ: ಜೂನ್ 1ರ ವೇಳೆಗೆ ಮಾನ್ಸೂನ್ ಮಾರುತಗಳು ಕೇರಳ ತೀರಕ್ಕೆ ಪ್ರವೇಶಿಸಲಿವೆ. ಮೇ 31ರಿಂದ ಜೂನ್ 4ರವರೆಗೆ ನೈರುತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಇದರಿಂದ ಮುಂಗಾರು ಮಳೆ ತರುವ ಮಾನ್ಸೂನ್ ಮಾರುತಗಳ ಚಲನೆ ತಡೆ ರಹಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಅಂಫಾನ್ ಚಂಡಮಾರುತದಿಂದ ಮಾನ್ಸೂನ್ ಮಾರುತಗಳ ಚಲನೆಗೆ ಕೆಲ ದಿನಗಳ ಕಾಲ ತಡೆ ಉಂಟಾಗಿತ್ತು. ಇದೀಗ ಮತ್ತೆ ನೈರುತ್ಯ ಮಾರುತಗಳು ಕೇರಳ ತೀರದತ್ತ ಪಯಣ ಮುಂದುವರಿಸಿವೆ.

ನೈರುತ್ಯ ಮಾರುತಗಳು ಗುರುವಾರದಂದು ಮಾಲ್ಡೀವ್ಸ್‍ನ ಕೊಮೊರಿನ್ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿಗೆ ಪ್ರವೇಶಿಸಿವೆ. ಮುಂದಿನ 48 ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಮಾನ್ಸೂನ್ ಮಾರುತಗಳು ಆಗ್ನೇಯ ದಿಕ್ಕಿಗೆ ಚಲಿಸಲಿದ್ದು, ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್ ಮತ್ತು ಪೂರ್ವ ಯೆಮನ್ ತೀರ ತಲುಪಲಿವೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

5 ದಿನ ಮೊದಲೇ ಮುಂಗಾರು ಪ್ರವೇಶ:
ಈ ಮೊದಲು ಜೂನ್ 6ಕ್ಕೆ (4 ದಿನ ಮುಂಚೆ ಅಥವಾ 4 ದಿನ ತಡವಾಗಿ) ಮುಂಗಾರು ಮಾರುತಗಳು ಭಾರತ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿತ್ತು. ಇದೀಗ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಏರ್ಪಡುವುದರಿಂದ 5 ದಿನ ಮುಂಚಿತವಾಗಿಯೇ ಮಾನ್ಸೂನ್ ಮಾರುತಗಳು ಕೇರಳ ತೀರ ತಲುಪಲಿವೆ.

ಮೀನುಗಾರರಿಗೆ ಎಚ್ಚರಿಕೆ:
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ 29ರಿಂದ ಜೂನ್ 4ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.