ಅಳದಂಗಡಿ : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿಯ ಕೆದ್ದು ಬಳಿ ಹೊಸ್ಮಾರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿಗೆ ಮುಳ್ಳುಹಂದಿ ಗುದ್ದಿದ ಕಾರಣ ಕಾರು ನಿಯಂತ್ರಣ ತಪ್ಪಿ ಮನೆಯ ತಡೆಗೋಡೆಗೆ ಹೊಡೆದು ಕಾರು ಜಖಂ ಆಗಿದೆ.
ಈ ಅಪಘಾತದಲ್ಲಿ ಕಾರಿನ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ. ಕಾರು ಚಾಲನೆಯಲ್ಲಿರುವಾಗ ಮುಳ್ಳುಹಂದಿ ಅಡ್ಡ ಬಂದ ಕಾರಣ ಕಾರಿನ ಏರ್ ಬ್ಯಾಗ್ ತೆರೆಯಿತು ಇದರಿಂದ ಚಾಲಕ ನಿಯಂತ್ರಣ ತಪ್ಪಿ ಕಾರು ಮನೆಯ ತಡೆಗೋಡೆಗೆ ಗುದ್ದಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.