HomePage_Banner_
HomePage_Banner_

ಸುಳ್ಯದಲ್ಲಿ ಕದ್ದ ರಬ್ಬರ್ ಅಂಡಿಂಜೆಯಲ್ಲಿ ಪೊಲೀಸ್ ವಶ

 

 

 

 

ಸಾಂಧರ್ಭಿಕ ಚಿತ್ರ

ಬೆಳ್ತಂಗಡಿ: ಸುಳ್ಯ ಸಮೀಪದ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಕಳವುಗೈಯ್ಯಲ್ಪಟ್ಟ ರಬ್ಬರ್ ಶೀಟ್‌ಗಳು ಬೆಳ್ತಂಗಡಿ ತಾಲೂಕಿನ ಅಂಡಿಂಜೆಯಲ್ಲಿ ಪೊಲೀಸ್ ವಶವಾದ ಘಟನೆ ವರದಿಯಾಗಿದೆ ಪೆರಾಜೆ ಗ್ರಾಮದ ಶರತ್ ಎಂಬವರ ರಬ್ಬರ್ ತೋಟದಿಂದ ಮೇ. 21ರಂದು ರಾತ್ರಿ 1300 ಕೆ.ಜಿ ರಬ್ಬರ್ ಶೀಟ್ ಮತ್ತು 900 ಕೆಜಿಯಷ್ಟು ರಬ್ಬರ್ ಸ್ಕ್ರಾಪ್ ಕಳವಾಗಿತ್ತು. ಇದರ ಮೌಲ್ಯ 2ಲಕ್ಷ 10ಸಾವಿರ ರೂ.ಗಳಷ್ಟು ತಿಳಿದುಬಂದಿದೆ. ರಾತ್ರಿ 12 ಗಂಟೆ ಸುಮಾರಿಗೆ ಪಿಕಪ್ ವಾಹನದಲ್ಲಿ ಇದನ್ನೆಲ್ಲ ಕೊಂಡೊಯ್ಯಲಾಗಿತ್ತು.

ಶರತ್‌ರವರಿಗೆ ಮರುದಿನ ಈ ವಿಚಾರ ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಕೇರಳದ ರಜನೀಶ್, ಅರುಣ್ ಕುಮಾರ್, ಸಿರಿಯಾಕ್ ಕುರಿಯನ್ ಎಂಬವರನ್ನು ದಸ್ತಗಿರಿ ಮಾಡಿ ಅವರಿಂದ ಕಳವು ಮಾಡಿದ ರಬ್ಬರ್ ಶೀಟ್ ಮತ್ತು ರಬ್ಬರ್ ಸ್ಕ್ರಾಪ್‌ನ್ನು ವಶಪಡಿಸಿಕೊಂಡರು.

ಈ ಆರೋಪಿಗಳು ಶರತ್‌ರವರ ತೋಟದಲ್ಲಿ ಟ್ಯಾಪಿಂಗ್ ಕಾರ್ಯ ನಡೆಸುತ್ತಿದ್ದರು. ಅವರ ಮೇಲೆ ಶರತ್‌ರಿಗೆ ವಿಶ್ವಾಸ ಕೂಡಾ ಬೆಳೆದಿತ್ತು. ಈ ಆರೋಪಿಗಳಿಗೆ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯಲ್ಲಿ ರಬ್ಬರ್ ತೋಟವೊಂದರಲ್ಲಿ ಟ್ಯಾಪರ್ ಆಗಿರುವ ಕೇರಳದ ವ್ಯಕ್ತಿಯೊಬ್ಬನ ಪರಿಚಯವಿದ್ದು ಆತನ ಮೂಲಕ ಬೆಳ್ತಂಗಡಿಯಿಂದಲೇ ಪಿಕಪ್ ವಾಹನ ತರಿಸಿ, ರಬ್ಬರ್ ಶೀಟ್‌ಗಳನ್ನು ಹೇರಿಕೊಂಡು ಅಂಡಿಂಜೆಗೆ ಹೋಗಿ ಅಲ್ಲಿನ ರಬ್ಬರ್ ತೋಟದ ಮನೆಯಲ್ಲಿ ಇರಿಸಿದ್ದರೆನ್ನಲಾಗಿದೆ.

ಪೊಲೀಸರು ಅಲ್ಲಿಂದ ರಬ್ಬರ್ ಶೀಟ್‌ಗಳನ್ನು ವಶಪಡಿಸಿಕೊಂಡರೂ ಆ ರಬ್ಬರ್ ತೋಟದ ಮಾಲಕರಿಗಾಗಲೀ, ಟ್ಯಾಪರ್‌ಗಾಗಲೀ ತಿಳಿಯದೆ ಮಾಡಿದ ಕುಕೃತ್ಯವಾಗಿರುವುದರಿಂದ ಅಂಡಿಂಜೆಯಿಂದ ವಶಪಡಿಸಿದ್ದೆಂದು ತೋರಿಸದೆ ಕೇಸು ಮಾಡಿದರೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.