HomePage_Banner_
HomePage_Banner_

ಕುಸಿದು ಬಿದ್ದ ಕುಕ್ಕುಜೆ ಸೇತುವೆ

ಬೆಳ್ತಂಗಡಿ: ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್‌ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೋಗುವ ರಸ್ತೆಯಲ್ಲಿರುವ ಕುಕ್ಕುಜೆ ಸೇತುವೆಯು ಸಂಪೂರ್ಣ ಶಿಥಿಲಗೊಂಡು ಮೇ.27ರಂದು ಸಂಜೆ ಕುಸಿದು ಬಿದ್ದಿದೆ.
ಕಳೆದ ವಾರದ ‘ಸುದ್ಧಿ ಬಿಡುಗಡೆ’  ಪತ್ರಿಕೆಯಲ್ಲಿ `ಕುಸಿಯುವ ಭೀತಿಯಲ್ಲಿರುವ ಸೇತುವೆಗೆ ಕಾಯಕಲ್ಪ ಅಗತ್ಯ’ ಎಂದು ಸಚಿತ್ರ ವರದಿ ಪ್ರಕಟಿಸಿ ಎಚ್ಚರಿಸಲಾಗಿತ್ತು. ಸುಮಾರು ೪೫ ವರ್ಷಕ್ಕೂ ಹಳೆಯದಾದ ಈ ಸೇತುವೆಯ ಫಿಲ್ಲರ್ ಕುಸಿದು ಬಿದ್ದು ಒಂದು ವರ್ಷ ಆಗುತ್ತಾ ಬಂದಿದ್ದು, ವಾಹನ ಚಾಲಕರಿಗೆ ಅಪಾಯವನ್ನು ತಂದಿತ್ತು. ಇದರ ದುರಸ್ತಿಗೆ ಈ ಭಾಗದ ನಾಗರಿಕರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಸೇತುವೆ ಶಿಥಿಲಗೊಂಡಿದ್ದರಿಂದ ಈ ಭಾಗದ ನೂರಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಗ್ರಾ.ಪಂ ನದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಟ್ಟಿತ್ತು.
ಮೇ ೨೭ರಂದು ಸಂಜೆ ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು, ಈ ಭಾಗದ ಜನರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಭೇಟಿ ನೀಡಿದ್ದಾರೆ. ಇನ್ನೇನು ಮಳೆಗಾಲ ಆರಂಭವಾಗುವ ಸೂಚನೆ ಇದ್ದು, ಈ ಭಾಗದ ಜನರಿಗೆ ಆತಂಕ ಎದುರಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.