HomePage_Banner_
HomePage_Banner_
HomePage_Banner_

ದ.ಕ.: ಮತ್ತೆ 11 ಮಂದಿಯಲ್ಲಿ ಕೊರೊನಾ ದೃಢ

Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದ ಆರೋಗ್ಯ ಇಲಾಖೆಯ ಬೆಳಗ್ಗಿನ ಬುಲೆಟಿನ್ ಪ್ರಕಾರ 11 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಇಂದು ದೃಢವಾದ 11 ಮಂದಿಯಲ್ಲಿ 10 ಮಂದಿ ಮಹಾರಾಷ್ಟ್ರ ಹಾಗೂ ಒಬ್ಬರು ಗುಜರಾತ್ ರಾಜ್ಯದಿಂದ ಹಿಂತಿರುಗಿದವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.

ಈ ಪೈಕಿ 3, 11, ವರ್ಷದ ಮಕ್ಕಳಿಗೂ ಸೋಂಕು ತಗುಲಿದೆ. ಇದಲ್ಲದೆ 36, 59,17, 45, 37 ಮಹಿಳೆ ಹಾಗೂ 35, 46, 39 ವರ್ಷದ ಪುರುಷರಲ್ಲಿ ಸೋಂಕು ದೃಢವಾಗಿದ್ದು ಇವರೆಲ್ಲರೂ ಪುತ್ತೂರು , ಬೆಳ್ತಂಗಡಿ ಹಾಗೂ ಉಳ್ಳಾಲದ ಕ್ವಾರೆಂಟೈನ್ ಗೆ ಒಳಪಡಿಸಲಾಗಿತ್ತು. ಇವರೆಲ್ಲರನ್ನೂ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.