HomePage_Banner_
HomePage_Banner_

ಬದ್ಯಾರು: ಡಾ| ಎಲ್.ಎಮ್ ಪಿಂಟೋ ಹೆಲ್ತ್ ಸೆಂಟರ್ ವಠಾರದಲ್ಲಿ ಶಾಸಕ ಹರೀಶ್ ಪೂಂಜಾರಿಂದ ಹೈಮಾಸ್ಕ್ ದೀಪ ಉದ್ಘಾಟನೆ

ಬದ್ಯಾರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಡಾ| ಎಲ್.ಎಮ್ ಪಿಂಟೋ ಹೆಲ್ತ್ ಸಂಟರ್ ವಠಾರ ಹಾಗೂ ಬದ್ಯಾರು ಬಸ್ ಸ್ಟಾಂಡ್ ಬಳಿ ನಿರ್ಮಾಣಗೊಂಡ ಹೈಮಾಸ್ಕ್ ದೀಪವನ್ನು ಶಾಸಕ ಹರೀಶ್ ಪೂಂಜಾ ಮೇ.27 ರಂದು ಉದ್ಘಾಟಿಸಿದರು.

ಬದ್ಯಾರು ಆಸ್ಪತ್ರೆಯ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ ಸದಸ್ಯ ಅಶೋಕ್ ಗೋವಿಯಸ್ ನೀಡುವ ಹಣ್ಣು ಹಂಪಲುಗಳನ್ನು ಡಾಕ್ಟರ್‍ಸ್‌ಗಳಿಗೆ, ನರ್ಸ್‌ಗಳಿಗೆ ಸಿಬ್ಬಂದಿಗಳಿಗೆ, ರೋಗಿಗಳಿಗೆ ಶಾಸಕ ಹರೀಶ್ ಪೂಂಜಾ ವಿತರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವತಿಯಿಂದ ಶಾಸಕ ಹರೀಶ್ ಪೂಂಜಾರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಡಾ| ಡೆಂಜಿಲ್, ಫಾ| ಮಲ್ವಿನ್ ಡಿಸೋಜಾ, ಡಾ| ಕಾಜಾಲ್, ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ತಾ.ಪಂ ಸದಸ್ಯೆ ಸುಶೀಲ ಬರಾಯ, ಸಿಸ್ಟರ್ ಪ್ರೇಮಲತಾ, ಗ್ರಾ.ಪಂ ಸದಸ್ಯರಾದ ಮಾಕ್ಸಿಂ ಸಿಕ್ವೇರಾ, ಸುಧಾಕರ್, ಸುಕೇಶ್ ಪೂಜಾರಿ, ಮಹಮ್ಮದ್ ಭಾವ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಲೇರಿಯನ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.