HomePage_Banner_
HomePage_Banner_
HomePage_Banner_

ಬೆಳ್ತಂಗಡಿ ತಾಲೂಕಿನಾದ್ಯಂತ ಮೊಬೈಲ್ ಮಳಿಗೆ ಮಧ್ಯಾಹ್ನದವರೆಗೆ ತೆರೆಯಲು ಮಾಲಕರ ತೀರ್ಮಾನ

Advt_NewsUnder_1

ಬೆಳ್ತಂಗಡಿ: ಕೊವೀಡ್-19 ಕೊರೋನಾ ರೋಗವು ವ್ಯಾಪಕವಾಗಿ ಹರಡುತ್ತಿದ್ದು ಈ ಪರಿಣಾಮವಾಗಿ ಬೆಳ್ತಂಗಡಿ ತಾಲೂಕಿನಾದ್ಯಾಂತ ಮುಂದಿನ 15 ದಿನಗಳ ಕಾಲ ಮದ್ಯಾಹ್ನ 2 ಗಂಟೆಯವರೆಗೆ ಮೊಬೈಲ್ ಮಳಿಗೆಗಳನ್ನು ತೆರೆಯಲು ಅಂಗಡಿ ಮಾಲಕರು ಸ್ವಯಂ ತೀರ್ಮಾನ ಕೈಗೊಂಡಿದ್ದಾರೆ.

ಮೇ.26ರಂದು ನಡೆದ ಮೊಬೈಲ್ ಮಾರಾಟಗಾರರ ಸಭೆಯಲ್ಲಿ ನಿರ್ಣಯಿಸಿದಂತೆ ಮೇ.27 ರಿಂದ ಜೂ.10ರ ತನಕ ಬೆಳ್ತಂಗಡಿ ತಾಲೂಕಿನ ಎಲ್ಲಾ ಮೊಬೈಲ್ ಮಾರಾಟ ಮಳಿಗೆಗಳೂ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಏಕೆಂದರೆ ಈಗಾಗಲೇ ಶಿರ್ಲಾಲು ಮತ್ತು ವೇಣೂರಿನಲ್ಲಿ ಕೊರೋನಾ ವೈರಸ್ ಇರುವುದರಿಂದ ಮತ್ತು ವಿಟ್ಲದಲ್ಲಿ ಪೊಲೀಸ್ ಪೇದೆಗೆ ಮೊಬೈಲ್‌ನಿಂದ ಬರುವ ವೈರಸ್ ಗಮನಿಸಿ ಮೊಬೈಲ್ ಮಾರಾಟಗಾರರಿಗೆ ಆತಂಕ ಉಂಟು ಮಾಡಿದೆ.

ನಮ್ಮ ಉದ್ಯಮದಲ್ಲಿ ಗ್ರಾಹಕರ ಸಮೀಪದಿಂದ ಮೊಬೈಲ್ ತೆಗೆದುಕೊಳ್ಳುವಾಗ ವೈರಸ್ ಸಂಭವಿಸುವ ಆತಂಕವಿದೆ. ಈ ಹಿನ್ನಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಎಲ್ಲಾ ಮೊಬೈಲ್ ಶಾಪ್‌ಗಳು ಅರ್ಧದಿನ ಮಾತ್ರ ತೆರೆಯಲು ತೀರ್ಮಾನಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.