HomePage_Banner_
HomePage_Banner_
HomePage_Banner_

ಹ್ಯುಮ್ಯಾನಿಟಿ ಟ್ರಸ್ಟ್ ವತಿಯಿಂದ ಬಡಕುಟುಂಬದ ಮಹಿಳೆಗೆ ರೂ. 3ಲಕ್ಷ ಮೌಲ್ಯದ ಆರ್‌ಸಿಸಿ ಮನೆ ಹಸ್ತಾಂತರ

Advt_NewsUnder_1

ಕೊಕ್ಕಡ: ಮಾನವೀಯತೆಯೇ ಅತ್ಯಂತ ಶ್ರೇಷ್ಟ ಧರ್ಮ ಎಂಬ ಧ್ಯೇಯ ವಾಕ್ಯದೊಂದಿಗೆ ಉಡುಪಿಯ ಬೆಳ್ಮಣ್ಣುವಿನಲ್ಲಿ ಕೇಂದ್ರ ಕಚೇರಿ ಹೊಂದಿ ಕಾರ್ಯಾಚರಿಸುತ್ತಿರುವ ಹ್ಯುಮ್ಯಾನಿಟಿ ಟ್ರಸ್ಟ್, ಪಟ್ರಮೆ ಗ್ರಾಮದ ಅನಾರು ಕಾಟ್ರಸ್‌ನ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಆಸಿಯಾ ಎಂಬವರಿಗೆ ಸುಮಾರು 3ಲಕ್ಷ ಮೌಲ್ಯದ ಆರ್‌ಸಿಸಿ ಮನೆಯನ್ನು ನಿರ್ಮಿಸಿಕೊಟ್ಟಿದೆ.

ಬೆಳ್ತಂಗಡಿ ವೃತ್ತನಿರೀಕ್ಷ ಸಂದೇಶ್‌ರವರು ಉದ್ಘಾಟಿಸಿ ಫಲಾನುಭವಿಗೆ ಹಸ್ತಾಂತರಿಸಿ ಮಾತನಾಡಿ, ಇದೊಂದು ಮಾದರಿ ಮಾನವೀಯ ಸೇವೆಯಾಗಿದ್ದು, ಇನ್ನಷ್ಟು ಬಡಕುಟುಂಬಗಳಿಗೆ ಹ್ಯುಮ್ಯಾನಿಟಿ ಟ್ರಸ್ಟ್‌ನ ಈ ನಿಸ್ವಾರ್ಥ ಕೊಡುಗೆ ಸಿಗುವಂತಾಗಲಿ, ಆಸಿಯರವರಿಗೂ ಈದ್ ಹಬ್ಬದ ಹೊಸ್ತಿಲಲ್ಲಿ ದೊರೆತಿರುವ ಈ ಹೊಸಮನೆಯ ಸುಖ ಶಾಂತಿ ಒದಗಿಸಲಿ ಎಂದು ಹಾರೈಸಿದರು. ಹ್ಯುಮ್ಯಾನಿಟಿ ಟ್ರಸ್ಟ್‌ನ ಟ್ರಸ್ಟಿ ರೋಶನ್‌ರವರು ಮಾತನಾಡಿ, ಕಳೆದ 3 ವರ್ಷಗಳಲ್ಲಿ 500ಕ್ಕೂ ಹೆಚ್ಚಿನ ಮನೆಗಳಿಗೆ ಯಾವುದೇ ಜಾತಿ, ಧರ್ಮ, ಭೇದವಿಲ್ಲದೇ ಮಾನವೀಯ ನೆಲೆಯಲ್ಲಿ ಸಹೃದಯಿಗಳಿಂದ ನಿಧಿ ಸಂಗ್ರಹಿಸಿ ಸುಮಾರು 5ಕೋಟಿಗೂ ಮಿಕ್ಕಿದ ನೆರವನ್ನು ಒದಗಿಸಲಾಗಿದೆ. ಆಸಿಯಾರವರಿಗೂ ಈ ಮನೆ ಹಬ್ಬದ ಕೊಡುಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸದ್ರಿ ನೆರವು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಝಕರಿಯ ಪಟ್ರಮೆ, ಬೆಳ್ತಂಗಡಿ ನ್ಯಾಯವಾದಿ ಬಿ.ಎಂ.ಭಟ್, ಪಟ್ರಮೆ ಗ್ರಾ.ಪಂ.ಸದಸ್ಯ ಶ್ಯಾಮರಾಜ್ ಉಪಸ್ಥಿತರಿದ್ದರು. ಸ್ಥಳೀಯ ಹಿರಿಯರೂ, ದಾನಿಗಳೂ ಆದ ಉಸ್ಮಾನ್, ಮನೆ ನಿರ್ಮಾಣದಲ್ಲಿ ಶ್ರಮದಾನದ ನೆರವು ಒದಗಿಸಿದ್ದ ಅನ್ಸಪ್ ಅನಾರು, ಅಶ್ರಫ್ ಇಲ್ಯಾಸ್, ಶರೀಫ್ ಇಲ್ಯಾಸ್ ಮೊದಲಾದವರೂ ಭಾಗವಹಿಸಿದ್ದರು.

ಟ್ರಸ್ಟ್‌ನ ಪ್ರಮುಖರಾದ ರೋಶನ್ ಮತ್ತು ಮನೆಯನ್ನು ಉದ್ಘಾಟಿಸಿದ ಸಂದೇಶ್‌ರವರಿಗೆ ಸ್ಥಳೀಯರ ಪರವಾಗಿ ಗೌರವಿಸಲಾಯಿತು. ಶ್ಯಾಮರಾಜ್ ಸ್ವಾಗತಿಸಿದರು. ಝಕರಿಯ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.