ಶಿರ್ಲಾಲು ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಕಿಟ್ ವಿತರಣೆ

ಶಿರ್ಲಾಲು: ಗ್ರಾಮದ ಮಹಿಳೆಯೊಬ್ಬರಿಗೆ ಕೊವಿಡ್-19 ಪಾಸಿಟಿವ್ ಕಂಡು ಬಂದಂತಹ ಹಿನ್ನೆಲೆಯಲ್ಲಿ ಶಿರ್ಲಾಲು ಸುತ್ತಮುತ್ತಲಿನ ಕೆಲವು ಮನೆಗಳನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯನ್ನಾಗಿ ಜಿಲ್ಲಾಡಳಿತ ಘೋಷಿಸಿದೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿನ ತೀರ ಅಶಕ್ತ ಕುಟುಂಬಗಳನ್ನು ಗುರುತಿಸಿ ದಾನಿಗಳಾದ ಸೌದಿ ಅರೇಬಿಯಾದ ಉದ್ಯೋಗಿ ಸುರೇಶ್ ಕರ್ದೊಟ್ಟು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿ ಕಿಶೋರ್ ಕುಮಾರ್‌ರವರ ಸಹಕಾರದೊಂದಿಗೆ ದಿನ ಬಳಕೆಯ ಆಹಾರದ ಕಿಟ್ಗಳನ್ನು ಮೇ.೨೬ ರಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಿನೇಶ್ ಕುಮಾರ್ ಕರ್ದೊಟ್ಟು, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್, ರಕ್ಷಿತ್ ಕುಮಾರ್ , ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷ ಜ್ಞಾನೇಶ್ ಕುಮಾರ್ ಕಟ್ಟ, ಕಾರ್ಯದರ್ಶಿ ರಂಜಿತ್ ಪೂಜಾರಿ ಅಜಿರೋಳಿ, ರಾಜೇಶ್ ಬರಮೇಲು ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.