HomePage_Banner_
HomePage_Banner_

ರಾಜ್ಯಾದ್ಯಂತ ಎಲ್ಲಾ ಮಾದರಿಯ ಹೋಟೆಲ್‍ಗಳು ಶೀಘ್ರ ಆರಂಭ ಜೂನ್ 1ರಿಂದ ಹೋಟೆಲ್ ಮತ್ತೆ ಆರಂಭಿಸಲು ಸಿಎಂ ಯಡಿಯೂರಪ್ಪ ಒಪ್ಪಿಗೆ

ಕೊರೊನಾ ವೈರಸ್ ಹರಡದಂತೆ ತಡೆಯಲು ಜಾರಿಗೊಳಿಸಿದ್ದ ಲಾಕ್‍ಡೌನ್‍ನಿಂದ ರಾಜ್ಯಾದ್ಯಂತ ಹೋಟೆಲ್ ಉದ್ಯಮವು ಸ್ಥಗಿತಗೊಂಡಿತ್ತು. ಈಗ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರಿಂದ ರಾಜ್ಯಾದ್ಯಂತ ಎಲ್ಲ ಮಾದರಿಯ ಹೋಟೆಲ್‍ಗಳನ್ನು ಜೂನ್ 1ರಿಂದ ಮತ್ತೆ ಆರಂಭಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.

ಈಗಾಗಲೇ ಹಂತ ಹಂತವಾಗಿ ಲಾಕ್‍ಡೌನ್‍ನನ್ನು ದೇಶಾದ್ಯಂತ ಹಂತ ಹಂತವಾಗಿ ಸಡಿಲಿಕೆ ಮಾಡುತ್ತಾ ಬರುತ್ತಿದ್ದು, ಲಾಕ್‍ಡೌನ್ 4.0ದಲ್ಲಿ ಸಂಚಾರ ಕೂಡ ಆರಂಭವಾಗಿರುವುದರಿಂದ ಬೇರೆ ಪ್ರದೇಶಗಳಿಂದ ಬಂದ ಜನರಿಗೆ ಹೋಟೆಲ್, ಲಾಡ್ಜ್ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಹೋಟೆಲ್‍ಗಳು ಬಾಗಿಲು ಹಾಕಿ ಎರಡು ತಿಂಗಳು ಕಳೆದಿದ್ದು, ಹೋಟೆಲ್ ಉದ್ಯಮದ ಅಸ್ತಿತ್ವದ ಮೇಲೆ ಕತ್ತಲು ಕವಿದಿದೆ. ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹೋಟೆಲ್‍ಗಳಿದ್ದು, 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದನ್ನೇ ನೆಚ್ಚಿ ಬದುಕು ನಡೆಸುತ್ತಿದ್ದಾರೆ. ಕಳೆದು ಎರಡು ತಿಂಗಳಿನಿಂದ ಇವರು ಆದಾಯವಿಲ್ಲದೇ ಅತಂತ್ರರಾಗಿದ್ದಾರೆ.

ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್ ವ್ಯಾಪಾರ ಆರಂಭಿಸುವ ಬಗ್ಗೆ ಮೇ 31ರೊಳಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ತಿಳಿಸಿದ್ದಾರೆ.

ಹೋಟೆಲ್‍ಗಳ ಮರು ಪ್ರಾರಂಭದಿಂದ ಆರ್ಥಿಕತೆಯೂ ಕೂಡ ಸ್ವಲ್ಪ ಚೇತರಿಕೆ ಕಾಣುವ ಸಾಧ್ಯತೆ ಇದೆ. ಆದರೆ ಕೇಂದ್ರ ಗೃಹ ಇಲಾಖೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.