HomePage_Banner_
HomePage_Banner_

ನಿಯಮ ಉಲ್ಲಂಘಿಸಿದ ನಗರದ 7 ಹೋಟೆಲ್‍ಗಳಿಗೆ ದಂಡ

ಬೆಳ್ತಂಗಡಿ: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ 7 ಹೋಟೆಲ್‍ಗಳ ಮೇಲೆ ಮೇ. 25ರಂದು ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ನೇತೃತ್ವದಲ್ಲಿ ದಾಳಿ ನಡೆಸಿ ತಲಾ ರೂ.2 ಸಾವಿರದಂತೆ ದಂಡ ವಿಧಿಸಲಾಯಿತು.

ಲಾಕ್‍ಡೌನ್ ಹಿನ್ನಲೆಯಲ್ಲಿ ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ನೀಡಿದ್ದರೂ, ಹೋಟೆಲ್‍ನ ಒಳಗೆ ಸರ್ವಿಸ್ ಮಾಡುತ್ತಿದ್ದ ನಗರದ ಏಳು ಹೋಟೆಲ್‍ಗಳ ಮೇಲೆ ದಾಳಿ ನಡೆಸಿ ದಂಡವನ್ನು ವಿಧಿಸಲಾಯಿತು. ಅಲ್ಲದೆ ನಿಯಮವನ್ನು ಉಲ್ಲಂಘಿಸಿದರೆ ಸೀಲ್‍ಡೌನ್ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.

ಅಲ್ಲದೆ ಸೀಯಾಳದ ಅಂಗಡಿಗಳಲ್ಲಿ ಸೀಯಾಳವನ್ನು ಪಾರ್ಸೆಲ್ ಆಗಿ ನೀಡಬೇಕು. ಕುಡಿಯಲು ನೀಡಬಾರದು ಎಂಬ ನಿಯಮವಿದ್ದರೂ, ಸಂತೆಕಟ್ಟೆ ಬಳಿ ಎರಡು ಅಂಗಡಿಗಳಲ್ಲಿ ಸೀಯಾಳವನ್ನು ಕುಡಿಯಲು ನೀಡುತ್ತಿರುವುದನ್ನು ಪತ್ತೆ ಹಚ್ಚಿ ಅವರಿಗೆ ದಂಡ ಹಾಕಲಾಯಿತು. ಕೊರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಬೆಳ್ತಂಗಡಿ ನಗರಕ್ಕೆ ವಿವಿಧ ಕಡೆಗಳಿಂದ ಮಾಸ್ಕ್ ಧರಿಸದೇ ಬಂದ 50 ಮಂದಿಗೆ ತಲಾ ರೂ.100ರಂತೆ ದಂಡ ಹಾಕಿ, ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಲಾಯಿತು.

ಧ್ವನಿವರ್ಧಕದ ಮೂಲಕ ಪ್ರಚಾರ:
ಲಾಕ್‍ಡೌನ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಮಕ್ಕಳನ್ನು, ವೃದ್ಧರನ್ನು ಪೇಟೆಗೆ ಕರೆದುಕೊಂಡು ಬರಬಾರದು, ಪ್ರತಿಯೊಬ್ಬರು ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ನಗರ ಪಂಚಾಯತು ವತಿಯಿಂದ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಯಿತು.

ಪ್ರತಿಯೊಬ್ಬರು ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು, ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ. ಅಂಗಡಿಗಳಿಗೆ ದಾಳಿ ಸಂದರ್ಭ ಇಂಜಿನಿಯರ್ ಮಹಾವೀರ ಆರಿಗ, ಪೊಲೀಸ್ ಇಲಾಖಾ ಸಿಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.